ಮನೆ ದೇವರ ನಾಮ ಓಂಕಾರ ಗಣಪತಿಯೇ  

ಓಂಕಾರ ಗಣಪತಿಯೇ  

0

ಓಂಕಾರ ಗಣಪತಿಗೆ ಜೈ |

ಶ್ರೀ ವಿನಾಯಕನಿಗೆ ಜೈ|

ಓಂಕಾರ ಗಣಪತಿಗೆ ಕೋಟಿ ವಂದನೆ |

ಎಂದೆಂದೂ ಬೇಡುವೆನು ನಿನ್ನಯ ಕರುಣೆ |

ಮೈದೋರಿ ಸಲಹು ಸ್ವಾಮಿ ಲಂಬೋದರನೇ |

ವಿಘ್ನಗಳ ನೀವು ವಿಘ್ನೇಶ್ವರನೇ ||ಪ||

ಭಕ್ತಿಯ ನೆಪದಲ್ಲಿ ಯುಕ್ತಿಯ ನಡೆಸುವರು|

ಧರ್ಮದ ಉಸಿರಿನಲ್ಲಿ ನಿಧಿಗಳಿಸಿ ನುಂಗುವರು|

ಬೂಟಾಟಿಕೆಯ ಮಾಡುವ ಗಂಟು ಕಳ್ಳರು|

ಸತ್ಯವಾ ಮರೆಮಾಚಿ ಸುಳ್ಳನೆ ಮರೆಸುವರು|

ತ್ಯಾಗದ ಹೆಸರು ಹೇಳಿ ಭೋಗವಾ ಪಡೆಯುವರು|

ಆದರ್ಶ ಸಾರುವ ಹಗಲು ಸುಳ್ಳರು |

ನೂರೆಂಟು  ಬಡಿವಾರ ಮಾಡುತ್ತ ನಡೆಯೋರ |

ಕಣ್ಣು ತೆರೆಸಿ ಬುದ್ಧಿ ಕಲಿಸು ಗಣನಾಯಕ ||ಓಂಕಾರ||

ದುಡ್ಡಿನ ಅಮಲಲ್ಲಿ ನೀತಿಯ ಹಳಿದವರು |

ಗದ್ದುಗೆ ಮೇಲೇರಿ ದೀನರಾ ತುಳಿದವರು |

ಎಂದ್ದಿದ್ದರೂ ನಿನ್ನ ಮುಂದೆ ಮಣಿಯಲೇಬೇಕು |

ಹಮ್ಮಿನ ಬಿಂಕದಲಿ ದಿಮ್ಮನೆ ನಡೆದವರು |

ಕೊಬ್ಬಿನ ಮಬ್ಬಿನಲ್ಲಿ ಪ್ರೀತಿಯ ಮರೆತವರು |

ಹೇಗಿದ್ದರೂ ನಿನ್ನಲ್ಲೇ ಗುರು ಶರಣಾಗಲೇಬೇಕು |

ನಿನ್ನನ್ನು ಪೂಜಿಸುವ ನಿನ್ನನ್ನೇ ಧ್ಯಾನಿಸುವ |

ಜನರ ಒಲಿದು ದುಗುಡ ಕಳೆಯೋ  ಗಣನಾಯಕ ||ಓಂಕಾರ||

ಹಿಂದಿನ ಲೇಖನಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ: ಮಕ್ಕಳು ಸಾವು
ಮುಂದಿನ ಲೇಖನಜೇನುಹುಳು ಕಚ್ಚಿದ್ದಕ್ಕೆ ಮನೆ ಮದ್ದು