ಎಲ್ಲಾ ಶಿವಮಯವೂ |
ಜಗದಳು ಎಲ್ಲಾ ಶಿವಮಯವು |
ಶಿವ ಮಯವೂ ಶಿವಮಯವೂ||
ಶಿವ ಮಯವೂ ಶಿವಮಯವು||
ಎಲ್ಲಾ ಶಿವಮಯವು|
ಗಗನದಿ ಬೆಳಗುವ ರವಿ ಚಂದ್ರರು, ಜಲ ಸುರಿವ ಆ ಮೇಘಗಳು ||
ಸುಳಿ ಸುಳಿದಾಡುವ ತಂಬೆಲರೂ||
ಉಸಿರಾಡುವ ಎಲ್ಲಾ ಜೀವಕೋಟಿಯು ||ಎಲ್ಲಾ ಶಿವಮಯವು||
ನಿತ್ಯ ನಿರ್ಮಲ ಸತ್ಯವು ಶಿವನೇ, ತತ್ವಕ್ಕೆ ಆಧಾರ ಪರಶಿವನೇ ||
ಪರಮ ನಿರ್ಗುಣ ನಿರಂಜನ ಶಿವನೇ||
ಸಚ್ಚಿದಾನಂದ ಶಾಶ್ವತ ಶಿವನೇ ||ಎಲ್ಲಾ ಶಿವಮಯವು||