ಲೋಕ ಪಾವನೆ ಗಂಗೆ ಜನ್ಮವೆತ್ತಿದ ಪಾದ|
ಶಿಲೆಯಾದ ಮುನಿ ಸತಿಗೆ ಜೀವ ನೀಡಿದ ಪಾದ|
ಆಕಾಶ ಭೂಮಿಗಳ ಹಳೆದ ಶ್ರೀ ಪತಿಯ ಪಾದ|
ಮುಕ್ತಿಯನು ಕರುಣಿಸುವ ವೆಂಕಟೇಶನ ಪಾದ |
ಸತ್ಯ ಧರ್ಮಗಳೇ ಈ ಪಾದ ಕಮಲಗಳು,
ಲಕ್ಷ್ಮಿಯ ಸೇವಿಸುವ ಶ್ರೀ ಹರಿ ಚರಣಗಳು ||
ದರುಶನ ಮಾತ್ರದಲೆ ಕಳೆಯುವುದು ಪಾಪಗಳು |
ಆದರೂ ಕ್ಷಣ ಮಾತ್ರದಲ್ಲಿ ಕಳೆಯುವುದು ಪಾಪಗಳು|
ನಂಬಿದವರಿಗೆಲ್ಲ ಹುಟ್ಟು ಸಾವಿನ ನೋವುಗಳು|| ಸತ್ಯ ಧರ್ಮಗಳೆ||
ಕತ್ತಲಿನಿಂದ ನಿನ್ನ ಎಂದು ಬೆಳಕಿಗೆ ನಡೆಸುವುದು|
ಉತ್ತಮ ಮಾರ್ಗದಲ್ಲಿ ಕೈ ಹಿಡಿದು ನಡೆಸುವುದು|
ಬದುಕಿನ ಅರ್ಥವನ್ನು ಬಿಡದೆ ಕಲಿಸುವುದು|
ನೆಮ್ಮದಿ ಶಾಂತಿಯನು ಬಾಳಲಿ ತುಂಬುವುದು||ಸತ್ಯ ಧರ್ಮಗಳೇ ||
ನಯನ ಕಮಲದಿಂದ ಪೂಜೆಯನ್ನು ಮಾಡು|
ಮನದ ಗಂಗೆಯಿಂದ ಅಭಿಷೇಕವನ್ನು ಮಾಡುವ|
ಶಿವ ಚರಣದಲ್ಲಿ ಇರಿಸಿ ಧ್ಯಾನ ಮಾಡು ||
ಸುಲಭದಲಿ ಆಗ ವೈಕುಂಠ ನಿನದು ನೋಡು | ವೈಕುಂಠ ನಿನದು ನೋಡು|