ಬಿಡಲಾರೆ ನಿನ್ನ ಪಾದ ಅಮ್ಮ|
ನಿನ್ನಡಿಗೆ ಬಂದು ಬಿಡಲಾರೆ ನಿನ್ನ ಪಾದ ಅಮ್ಮ||ಪ
ಸೌಮ್ಯವಾದ ನಿನ್ನ ರೂಪ |
ರಮ್ಯಾ ವಾದ ನಿನ್ನ ಸ್ವರೂಪ |
ದೇವಿ ನಿನ್ನ ವಶಳಾಗಿ ಹೋದೆ |
ತಾಯಿ ನೀನೆ ಎಂದು ಮೊರೆ ಹೋದೆ |
ಬಿಡಲಾರೆ ನಿನ್ನ ಪಾದ ಅಮ್ಮ ||1
ಜಗಜ್ಜನನಿ ಜಗನ್ಮಾತ ಜಗದೀಶ್ವರಿ |
ರಘವೆಲ್ಲ ದೂರ ಮಾಡು ಮಹೇಶ್ವರಿ |
ಬೇಗ ಬಂದೇನ ಸಲಹು ಉಮಾ ಶಂಕರಿ |
ನೀಗಿಸುವ ಬಾರಯೇ ಪರಮೇಶ್ವರಿ |
ಬಿಡಲಾರೆ ಪಾದ ಅಮ್ಮ.||2
ಜ್ಯೋತಿ ನೀನು, ಹಣತೆ ನಾನು |
ಜ್ಯೋತಿಯಾಗಿ ನೀನಿರಲು ಬೇಡ ಇನ್ನೇನು |
ಮತಿಯಿಂದ ಬಾಳಿಸು ಕೊನೆಯವರೆಗೂ ಎನ್ನನು |
ಸತಿ, ಪಾರ್ವತಿಯ ತೋರಿಸು ಜಾನವಿ ವಿಠಲನನು |
ಬಿಡಲಾರೆ ನಿನ್ನ ಪಾದ ಅಮ್ಮ||3