ಬೇಸರದೆ ಇಂದು ಸದಾಶಿವನೆನ್ನಿ ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ||pa||
ನಂದಿವಾಹನ ಆನಂದನು ಎನ್ನಿ ಸುಂದರ ಗಣಪನ ತಂದೆಯು ಎನ್ನಿ
ನಂಬಿ ಭವಾಂಬುಧಿ ಅಂಬಿಗನೆನ್ನಿ ಅಂಬಿಕೆಯರಸು ತ್ರಯಂಬಕನೆನ್ನಿ ||1||
ದಕ್ಷಯಜ್ಞಾ ವೀಕ್ಷಕನೆನ್ನಿ ಪಕ್ಷಿಗಮನ ಭಟರಕ್ಷಕನೆನ್ನಿ | ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆ ಪಿಡಿದಿಹನೆನ್ನಿ ||2||
ಬೇಡಿದ ಭಾಗ್ಯವ ನೀಡುವನೆನ್ನಿ ಬೇಡನ ಭಕುತಿಗೆ ಕೂಡಿದನೆನ್ನಿ| ಈ ಪರಿ ನೆನೆದರೆ ಪಾಪದೂರೆನ್ನಿ ಶ್ರೀ ಪ್ರಸನ್ವೆಂಕಟಗೆ ಅತಿ ಪ್ರೀಯನೆನ್ನಿ ||3||
Saval TV on YouTube