ಮನೆ ದೇವರ ನಾಮ ಲಿಂಗಯ್ಯ ಮಾತನಾಡೋ

ಲಿಂಗಯ್ಯ ಮಾತನಾಡೋ

0

ಲಿಂಗಯ್ಯ ಮಾತನಾಡೋ ದೋಂಟದ, 

ಸಿದ್ದಲಿಂಗಯ್ಯ ಮಾತನಾಡೋ ||

ಸಂದಾನ ಶರಣಾರ ಅಂಗೈಯೊಳಗಿರುವಂಥ ||

ಲಿಂಗಯ್ಯ ಮಾತನಾಡೋ || ಲಿಂಗಯ್ಯ ||

ಹರನೇ ನೀ ಮಾತನಾಡೋ ಅಭವನೆಂಬ, 

ಸುರನೇ ನೀ ಮಾತನಾಡೋ ||

ಸುರರ ದೇವರ್ಕಾಳ ಬರಿತಾನೊಳಗೆ ನೀ ||

ಮರೆಯಾತ ಮಾತನಾಡೋ

ದೋಂಟದ ಸಿದ್ದಲಿಂಗಯ್ಯ ಮಾತನಾಡೋ ||ಲಿಂಗಯ್ಯ ||

ಅಕ್ಷಯ ಮಾತನಾಡೋ , ಅಭವನೆಂಬ ಕುಕ್ಷೀಯಾಮಾತನಾಡೋ ||

ಕುಕ್ಷೀಯೊಳಗೆ ತ್ರೈಲೋಕಾವಾ ಅಲುವಂಥ ||

ರಕ್ಷಿತ ಮಾತನಾಡೋ, ದೋಂಟದ ಸಿದ್ದಲಿಂಗಯ್ಯ ಮಾತನಾಡೋ || ಲಿಂಗಯ್ಯ ||

ಜಂಗಮ ರೂಪಿನಿಂದ ಜಗವ ನೋಡಬಂದಂಥ, ತಂದೆ ನೀ ಮಾತನಾಡೋ ||

ಜಂಗುಳಿ ದೈವದೊಡೆಯ ತೋಂಟದ ಸಿದ್ದಲಿಂಗಯ್ಯ ಮಾತನಾಡೋ || ಲಿಂಗಯ್ಯ||