ಶ್ರೀಕಂಠ ವಿಷಕಂಠ ||
ಲೋಕವನುಳಿಸಲು ವಿಷವನು ಕುಡಿದ, ನಂಜುಂಡೇಶ್ವರನೇ ||
ಗತಿ ನೀನೆಂದರೆ ಓಡುತಾ ಬರುವ, ಕರುಣಾ ಸಾಗರನೆ || ಶ್ರೀಕಂಠ ||
ಹರಿಯುವ ನದಿಯಲ್ಲಿ ಕಲರವ ನಾದ ಕೂಡ ||
ಶಿವ ಶಿವ ಎನ್ನುತಿದೆ | ಅರಳಿದ ಸಮದಲಿ ನಲಿಯುವ ಬ್ರಮರವು |
ಶಿವನಾಮ ಹಾಡುತಿದೆ | ಬೀಸುವ ಗಾಳಿಯು ಪರಿಮಳ ಚೆಲ್ಲುತ್ತ, ನಿನ್ನನೆ ಸ್ಮರಿಸುತ್ತಿದೆ || ಶ್ರೀಕಂಠ ||
ಸಾವಿರ ಜನುಮವೇ ಬಂದರು ಹೀಗೆ, ನಿನ್ನ ಸನ್ನಿಧಿಯಲ್ಲಿ ಇರಿಸು |
ಉಸಿರಿನ ಉಸಿರಲು ತಂದೆ ಎಂದು, ನಿನ್ನ ನಾಮವನು ಬೆರೆಸು |
ಕತ್ತಲಲಿರುವೆ ನೆಮ್ಮದಿ ತುಂಬಿ, ಕೈ ಹಿಡಿದು ನಡೆಸು || ಶ್ರೀಕಂಠ ||