ಮನೆ ದೇವರ ನಾಮ ಪಾಪವನೀಗುವ ಪುಣ್ಯದ

ಪಾಪವನೀಗುವ ಪುಣ್ಯದ

0

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ |

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ | ನಮತಾಂ ಕಾಮಧೇನವೇ |

ಪಾಪವ ನೀಗುವ ಪುಣ್ಯದ ಮಣ್ಣಿದು ಪಾವನ ಮಂತ್ರಾಲಯ ||

ಸಾವಿರ ಪವಾಡ ಮಾಡುವ ಗುರುವರ ನೆಲೆಸಿದ ದಿವ್ಯಾಲಯ |

ಗುರು ರಾಜರ ಮಂತ್ರಾಲಯ ಗುರುರಾಜರ ಮಂತ್ರಾಲಯ |

ರಾಯರು ಆಳಿರುವ ಭಕ್ತಿಯ ರಾಜ್ಯವಿದು, ರಾಯರ ಕೃಪೆಯನ್ನು ನಿತ್ಯ ನೋಡುವ ತಾಣವಿದು ||

ನಂಬಿಕೆ ದೀಪವ ಮನದಲ್ಲಿ ಬೆಳಗುವ ಪುಣ್ಯದ ಭೂಮಿ ಇದು ||

ಬಾಳಲ್ಲಿ ಹೋರಾಡಿ ಬೇಸತ್ತ ಜೀವಕ್ಕೆ ಶಾಂತಿಯ ನೀಡುವುದು | ಮನಶಾಂತಿಯ ಧಾಮವಿದು || ಪಾಪವ ||

ತುಂಗಾ ನದಿ ಸ್ಥಾನ ದಿವ್ಯ ನಾಮ ಧ್ಯಾನ, ಭಕ್ತಿ ಪೂರ್ಣ ಗಾನ ಸುದಾರ ಸಪಾನ ||

ಗಂಟೆಯ ನಾದದ ಮಂತ್ರದ ಘೋಷಣೆ ತುಂಬಿದೆ ಆ ಗಗನ ||

ಮೈಯಲ್ಲಿ ಕಂಪನ ಏನೋ ರೋಮಾಂಚನ ತಂದಾ ಬೃಂದಾವನ | ಭಕ್ತಿಯ ನವ ನಂದನ || ಪಾಪವ ||