ಮನೆ ದೇವರ ನಾಮ ದೇವರೆ ಮಾಡಿದ ದೇಹವೆಂಬ

ದೇವರೆ ಮಾಡಿದ ದೇಹವೆಂಬ

0

ದೇವರೇ ಮಾಡಿದ ದೇಹವೆಂಬ

ಈ ಗುಡಿಯ ಮೇಲೆ ನೋಡು ||

ತಾವರೆಯಂತೆ ತೂಗುತ್ತಿರುವುದು

ಶಿವದೊಂದು ಗೂಡು

ಅದರೊಳಗೆ ಒಮ್ಮೆ ಬಂದು ಕೂಡು ||2||  || ದೇವರೇ || 1

ಸಾವಿರ ವೇಷದ ಸಾಗಿದ ಜಗದ ಕಣ್ಣಿಗೆ ಬಿದ್ದಿಲ್ಲ |

ಸಾವಿರ ಸಾರೇ ಸಾಹಸ ಮಾಡಿದರೇನು ಗೆದ್ದಿಲ್ಲ |

ನೋವು ನುಂಗದೆ ನರಳುವ ರೋಗಿಯ ಕಣ್ಣಿಗೆ ಬಿದ್ದಿಲ್ಲಾ

ಮವನೆಂದು ಮಲಗಿದ ಮಾನವ ಇನ್ನು ಎದ್ದಿಲ್ಲಾ || ದೇವರೆ || 2

ಸಾವಿಗೆ ಸೋಲದ ಅಗಣಿತ ಯೋಗಿಗಳ ಅನೇಕ ರೂಪದಲ್ಲಿ|

ನೋವನೆ ನುಂಗುತ ನಲಿಯುತಲಿಹರು ಶಕ್ತಿಯ ಪೀಠದಲ್ಲಿ|

ಬಾವಲಿಯಂತೆ ತಲೆಕೆಳಗಾಗಿ ಗೂಡಿಗೆ ಜೋಗಾಡಿ ||

ಕಾವಲಂತೆ ಕುಳಿತಿಹರಲ್ಲಿ ಓ ಜಪ ತಪ ಮಾಡಿ || ದೇವರೇ || 3

ಬೇಡರ ಕಣ್ಣಪ್ಪ ಕೊಟ್ಟನು ಶಿವನಿಗೆ ಕಿತ್ತೆರಡು ಕಣ್ಣು |

ಕಾಡಿನೊಳಗೆ ಕಂಡುಹಿಡಿದಿದ್ದ ಕಂಡಯೋಗವನ್ನ |

ಕಾಡುವ ಯುಗದಳು ಯುಗತಾನಾಗಿ ಕೂಡಿದ ಶಿವನನ್ನ

ಗೂಡಿನಲ್ಲಿ ಗೂಡಾಗಿ ಸೇರಿ  ಅರಳಿಸಿ ಒಳಗಣ್ಣ || ದೇವರೇ || 4