ಒಬ್ಬನೇ… ಒಬ್ಬನೇ… ಮಂಜುನಾಥನೊಬ್ಬನೇ ||3||
ಜ್ಞಾನಕೂ ಧ್ಯಾನಕೂ ಒಬ್ಬನೇ |
ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ || ಒಬ್ಬನೇ || 1
ನೀನೊಂದು ಕಲ್ಲುಎಂದೆ ನೀನೆಲ್ಲು ಇಲ್ಲವೆಂದೆ |
ನೀನೆ ನನ್ನ ಬಳಿಗೆ ಬಂದು ನಿನ್ನಲ್ಲೇನೇ ಇರುವೆನೆಂದೆ |
ನನ್ನ ಕಣ್ಣ ತೆರೆತೆರೆದು ಒಳಗಣ್ಣ ತೋರಿಸಿದೆ |
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ |
ಪೊರೆಯಲು ತೆರೆಯಲು ಒಬ್ಬನೇ |
ಪೊರೆಯಲು ನಮ್ಮನ್ನು ಒಬ್ಬನೇ ಹರನೊಬ್ಬನೆ || ಒಬ್ಬನೇ || 2
ತಂದೆ ಇಲ್ಲದೋನೇ ಎಂದೆ | ತಂದೆಯಾಗಿ ನೀನು ಬಂದೆ |
ನಾನು ಅನ್ನೋ ಅಹಂಕಾರ ಸುಟ್ಟು ಭಸ್ಮ ಮಾಡಿದೋನೆ |
ಪಂಜನ್ನು ದೀಪ ಮಾಡಿ ಹೊಸ ಜನ್ಮವನ್ನೇ ತಂದೆ |
ಅರಿವಿಗೆನೇ ಗುರುವಾದ ಗುರುಗಳ ಗುರು ಇವನೇ |
ಸತ್ಯವು ನಿತ್ಯವೂ ಒಬ್ಬನೇ |
ಧರ್ಮವು ದೈವವೂ ಒಬ್ಬನೇ ಶಿವನೊಬ್ಬನೇ || 3
ಶಂಕರ ಶಂಕರ ಹರ ಹರ ಶಂಕರ |
ಮುರಹರ ಭವಹರ ಶಶಿಧರ ಶುಭದರ |
ಜಯ ಜಯ ಶಂಭೋ ಜಯ ಜಯ ಗಂಗಾಧರ | ಶಂಕರ |
ಜಯ ಜಯ ಶಂಭೋ ಜಯ ಜಯ ಗಂಗಾಧರ | ಶಂಕರ |
ಜಯ ಜಯ ಶಂಭೋ ಜಯ ಗಂಗಾಧರ |
ಶಂಭೋ ಹರ ಹರ |
ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ || 4