ವಿದ್ಯಾಭಾಸ್ಕರರೆಂಬ ವೃಕ್ಷ ಬೆಳದಿಹುದು |
ಕಣ್ವ ಮಣ್ಣಿನ ಕಣಕಣದಲಿಂದು || ಪ
ಗುರು ನೀನೆ ಕಣ್ವ ವೃಕ್ಷದ ಶ್ರೇಷ್ಟ ರೆಂಭೆ |
ನಿನ್ನ ಭಜಿಸುತ ದಿನಗಳುರುಳಲಿ ಎಂಬೆ |
ಸತತ ಶ್ರಮಿಸಿ ನಡೆಸಿದೆ ಮಠವಂದು |
ನಿನ್ನ ಮರೆಯಲು ಸಾಧ್ಯವೇ ನಾವಿಂದು || 1
ಗುರು ಯಜ್ಞವಲ್ಕ್ಯ ಗುರು ಪರಂಪರೆಯ |
ಜಗತ್ತಿಗೆ ಸಾರುತಾ ಹಗಲಿರುಳು ನಡೆದೆ |
ಸಹಿಷ್ಣುತೆಯ ಸಾರ್ವಭೌಮ ನೀನು |
ನಿನ್ನ ಬಳಿಗೆ ಬಂದವರಿಗೆ ಧೇನು || 2
ಗುರು ನಿಮ್ಮ ಚರಣಾರವಿಂದದಲಿ |
ಶುಕ್ಲ ಯಜುರ್ವೇಗಳ ಬಾಳು ಬೆಳಗಲಿ |
ಕಣ್ಮ ಶಾಖೆಯ ರೆಂಭೆ ಕೊಂಬೆ ಚಿಗುರಲಿ |
ಮತ್ತೆ ನಿನ್ನಂತಕರುಣದಲ್ಲಿ ಗಟ್ಟಿತನ ನಮ್ಮದಾಗಿರಲಿ || 3
ಗುರುವಾಗಿ ದೊಡ್ಡ ಪೀಠ ಅಲಂಕರಿಸಿದರೂ…|
ಸಹಜವಾಗಿ ನೀರು ಹಾಲಲ್ಲಿ ಬೆರೆಯುವಂತೆ |
ಬರುವ ಭಕ್ತರೊಡನೆ ಬೆರೆಯುವ ನಿನ್ನ ಮರೆಯದೆಂತು |
ನಿನ್ನ ಮಾತಿನಲ್ಲೇ ಭಕ್ತರ ದುಃಖ ದೂರ ಮಾಡಿದೆ || 4
ಹುಣಸಿಹೊಳೆಯ ಚಿನ್ನದ ನೆಲದ ವೃಂದಾವನದಲ್ಲಿ |
ಇಂದಿಗೂ ಬರುವ ಭಕ್ತರನುದ್ಧಿರಿಸುತಲಿ |
ನೆಲೆ ನಿಂತ ವಿದ್ಯಭಾಸ್ಕರರ ಅನುಗ್ರಹ ಅಗಲಿ |
ಹೊಸ ತನವ ಕಾಣಿಸು ಜಹಾನ್ವಿ ವಿಠಲ || 5