ದಾಸರಯ್ಯಾ ಪುರಂದರ ದಾಸರು |
ದಾಸನೆನುತ ಹರಿಯ ಹೃದಯ ನಿವಾಸ |
ದಾಸರಯ್ಯಾ ಪುರಂದರ ದಾಸರು || ಪ
ತಾಳ ತಂಬುರಿಯನೆ ಪಿಡಿದರು |
ತಳಮಳದ ಭಾವ ಮೆಟ್ಟಿದವರು |
ಮನೆ, ಮಠ ತೊರೆದು ನಿಂತರು |
ಸತಿ, ಸುತರನೆಲ್ಲ ಬಿಟ್ಟು ಹೊರಟರು |
ದಾಸರಯ್ಯಾ ಪುರಂದರ ದಾಸರು || 1
ಲೋಕದ ಡೊಂಕನು ಹಾಡಿನಲ್ಲಿ ತಿದ್ದುತ |
ಲೋಕದ ನುಡಿಗಳ ನುಡಿದರು ಬರೆಯುತ |
ತೋರಿದರು ಪಾಂಡುರಂಗನ ಮಹಿಮೆಯಾ |
ಸಾರಿದರು ಪದ್ಯಗಳಲ್ಲಿ ವಿಠಲನ ಗರಿಮೆಯಾ |
ದಾಸರಯ್ಯಾ ಪುರಂದರ ದಾಸರು || 2
ಮೆಚ್ಚಿದ ಪಾಂಡುರಂಗ ಪುರಂದರ ದಾಸರನು |
ನೆಚ್ಚಿ ತೋರಿದ ದಾಸರಿಗೆ ತನ್ನಯ ದರುಶನವನು |
ದಾಸ ಶ್ರೇಷ್ಠರಾಗಿ ನಿಂತರು ನಾರದ ಅಂಶಜ |
ವಾಸ ಮಾಡಿದರು ಜಹಾನ್ವಿ ವಿಠಲನ ಹೃದಯಜ |
ದಾಸರಯ್ಯಾ ಪುರಂದರ ದಾಸರು || 3