ನೀನೇ ಧನ್ಯನೋ…… ನೀನೆ ಜಗದಿ ಮಾನ್ಯನೋ, |
ಸತತ ಹರಿಯ ಭಕ್ತಿ ಸುಧೆಯ ಸೇವಿಸಿದ. || ಪ
ಮನೆಯ ಬಿಟ್ಟು ವೈರಾಗ್ಯದಿ ವಿಜಯನಗರದಿ ನಿಂತೆ,
ಭಕ್ತಿ ಎಂಬ ಭಾವದಲ್ಲಿ ಹೂ ಅರಳಿಸಿ, |
ಸಾನುರಾಗದಿ ತಾಳ ತಂಬೂರಿ ಮೀಟಿ ನಿಂತೆ, ||
ನೀನೇ ಧನ್ಯನೋ…..|| 1
ವ್ಯಾಸರಾಯರು ನೀಡಿದ ಅಂಕಿತ ಧರಿಸಿ,
ಪುರಂದರ ವಿಠಲನ ಸ್ಮರಿಸುತ ಸಾವಿರ ಕೀರ್ತನೆ
ಬರೆಯುತ ಲೋಕದ ಡೊಂಕು ತಿದ್ದಿ ನಿ ನಿಂತೆ.
ನೀನೇ ಧನ್ಯನೋ….. || 2
ನಿನ್ನಂತೆ ನನಗೂ ಅಪರಿಮಿತ ಭಕ್ತಿ ನೀಡೋ |
ಪರಮಪುರುಷ ವಿಠಲನ ಸೇವೆ ಮಾಡಿಸೋ |
ಧನ್ಯಳಾಗಿ ಈ ಜಗದಿ ಬಾಳಿಸೋ ||
ನೀನೇ ಧನ್ಯನೋ…..|| 3
ತೀವ್ರವಾಗಿದೆ ಎನಗೂ ನಿನ್ನ ಹಾಗೆ ಭಕ್ತಿ ಭಾವದಲಿ |
ಮೀಯೇ ಆಶೆ. | ಕರುಣಿಸಿ ನೀ ದಾರಿ ತೋರಿಸೋ….|
ಜಾಹ್ನವಿ ವಿಠಲನ ಪ್ರೀಯ ಪುರಂದರ ದಾಸ, ||
ನೀನೇ ಧನ್ಯನೋ…..|| 4