ಮನೆ ದೇವರ ನಾಮ ಪ್ರೀತಿಸೋ ಎನ್ನ ಮನ್ನಿಸೋ ನನ್ನ

ಪ್ರೀತಿಸೋ ಎನ್ನ ಮನ್ನಿಸೋ ನನ್ನ

0

ಪ್ರೀತಿಸೋ ಎನ್ನ, ಮನ್ನಿಸೋ ನನ್ನ |

ಚಿದಂಬರ ಚಿನ್ನ, ||

ಭಕ್ತರ ಪ್ರಿಯಾ, ಸ್ವಾಮಿ ರಾಯ |

ನೆಲೆ ನಿಂತೆ ನೀನು ಮುರಗೋಡಪುರದಿ |

ಬೇಡಿ ಬಂದ ಭಕ್ತರ ಪೊರೆದೆ ರಾಯಾ ||

ಪ್ರೀತಿಸೋ ಎನ್ನ, ಮನ್ನಿಸೋ ನ್ನನ್ನ (1)

ಸುಖವನ್ನು ಕೇಳಲಾರೆ, ಬೇಕೆಂದು ಬೇಡಲಾರೆ |

ನೀಡೋ ನನ್ನ ಪಾದಸೇವಾ ಕೊನೆಯವರೆಗೆ |

ಹಂಬಲಿಸಿದೆ ಮನ ನಿನ್ನ ಸೇವಿಸಲು, ||

ಪ್ರೀತಿಸೋ ಎನ್ನ, ಮನ್ನಿಸೋ ನನ್ನ (2)

ದಾಸಿಯು ನಾನು, ದೇವನು ನೀನು. |

ನಿನ್ನ ಚರಣಾಂಬ್ರತ ಸೇವಿಸಿ ನಾನು |

ಪಾವನಳಾಗುವೆ ಹರಿಸೋ ನೀನು, ||

ಪ್ರೀತಿಸೋ ಎನ್ನ ಮನ್ನಿಸೋ ನನ್ನ (3)

ಗುರು ನೀನೆ, ಗುಣ ನಿಧಿ ನೀನೆ |

ನಿನ್ನ ಬಿಟ್ಟು ಯಾರಿಹರೆನಗೆ |

ಸನ್ನುತ್ತ ಮಹಿಮನೆ ಜಹ್ನವಿ ವಿಠಲನೆ

ಪಾರುಗಾಣಿಸೋ ರಾಯಾ ||

ಪ್ರೀತಿಸೋ ಎನ್ನ, ಮನ್ನಿಸೋ ನನ್ನ, (4)