ಅನುಗ್ರಹಿಸಿದನು, ಅನುಗ್ರಹಿಸಿದನು ಗುರುರಾಯ ಎನಗಿಂದು |
ಒಲುಮೆ ತೋರಿ ನಿಜ ದರುಶನ ನೀಡಿ |
ಅನುಗ್ರಹಿಸಿದನು, ಅನುಗ್ರಹಿಸಿದನು || ಪ
ಭವಸಾಗರ ದಾಟಿಸಲು ಕೈ ಹಿಡಿಯಲು ಬಂದಿಹನು |
ಭಯ ಬೇಡ ಮಗಳೇ ನಾನಿರುವೆ ಎಂದಿಹನು |
ಅಂತಃಕರಣದಿ ಬಂದ ಗುರುವೇ ನಿನ್ನ ಬಲವು |
ಬೇಸರಿಸದೆ ದಾರಿ ತೋರಿಸು ನನಗಿಂದು ಎಂದಿಹನು || 1
ಪದುಮನಾಭನ ಒಲುಮೆ ಎನಗೆ ತೋರಿಸು ಗುರುವೇ |
ನಿನ್ನ ಭಕ್ತರನು ಉದ್ದರಿಸಲೆಂದೆ ಶಾಂತ ಚಿತ್ತನಾಗಿ |
ಶ್ರೀಹರಿಯ ಸೇವೆಗೈಯುತ ವೃಂದಾವನದಿ ನಿಂತ ಗುರುವೇ |
ಅನುದಿನವು, ಅನುಕ್ಷಣವು ನಿನ್ನ ನಾಮವು ಎನಗಿರಲಿ || 2
ಸುಖ ನೀನು, ಬಂಧು ನೀನು, ನಿನ್ನ ಹೊರತು ಬೇಡ ಏನು |
ಗುರುವೇ ಸನ್ಮಾರ್ಗವ ತೋರಿ ನಡೆಸು ನಮ್ಮನು, |
ಕರುಣಾಸಾಗರ ಜಹ್ನವಿ ವಿಠಲನ ತೋರೋ || 3