ಅಂಬಾಭವಾನಿಯ ಚರಣಕಮಲದಲ್ಲಿ ವಂದಿಸುತ |
ದಿನ ದಿನ ನಾ ಬೇಡುವೆ ಹಸನಾದ ಬಾಳು. (ಪ)
ಭಾವದುರಿಯಲಿ ಬೆಂದೆ, ಹೀನ ಬುದ್ಧಿಯಲ್ಲಿ ತೊಳಲಾಡಿದೆ,|
ಜಗದಲ್ಲಿ ನಿನ್ನಂತಕರುಣ ಹೊಂದಿದವರಾರಿಲ್ಲ,
ನಿನ್ನ ಕಂದಳನು ನೀ ಸಲಹು ಜಗದಂಬೆ ||
ಅಂಭಾ ಭವಾನಿಯ ಚರಣಕಮಲದಲ್ಲಿ ವಂದಿಸುತ (1)
ಸುಜನರ ಸಂಪ್ರೀತೆ,! ಸುಗುಣೆ ನಿನ್ನ ಚಂದ್ರವದನವ ತೋರೆ, |
ಅರಿಯದೆ ನಿನ್ನ ನಾಮ, | ಬರಿದೆ ಬೆಂಡಾದೆನು ಭವದಲ್ಲಿ ||
ಅಂಬಾಭವಾನಿಯ ಚರಣಕಮಲದಲ್ಲಿ ವಂದಿಸುತ (2)
ದುಷ್ಟ ರಕ್ಕಸರ ಹುಟ್ಟು ಅಡಗಿಸಿದೆ, ನನ್ನ ಕಷ್ಟಕಳಿಯೇ |
ನಿರುತ ನಿನ್ನ ನಾ ಪಾಡುವೆ, ಅನುದಿನ ಸಲಹು ಜಗದಂಬೆ ||
ಅಂಬಾಭವಾನಿಯ ಚರಣ ಕಮಲದಲ್ಲಿ ವಂದಿಸುತ (3)
ಬೇಡಿ ಬರುವ ಭಕ್ತರ ಬಿಷ್ಟವ ಪೂರೈಸುವ ತಾಯೇ |
ಕರುಣದಿ ಜಹಾನ್ವಿ ವಿಠಲನ ಸೇವೆಯ ದೊರಕಿಸು ಜಗದಂಬೆ, ||
ಅಂಬಾಭವಾನಿಯ ಚರಣ ಕಮಲದಲ್ಲಿ ವಂದಿಸುತ (4)