ಮನೆ ದೇವರ ನಾಮ ಹರೇ ಶ್ರೀನಿವಾಸ

ಹರೇ ಶ್ರೀನಿವಾಸ

0

ಸಾಗಿ ಬಂದೆನೋ ಬಾಗಿ ಬಂದೆನೋ

ನಿನ್ನ ಭಕ್ತಳು ನಾನಾಗ ಬಂದೆನೋ || ಪ     

ಇರಲಿ ನಿನ್ನ ದಯೆಯು ಅಪಾರಾ

ತರಲಿ ದಿನವು ನಿನ್ನ ದರುಶನ ಸಾಕಾರಾ

ಮನವು ಮರ್ಕಟದಂತೆ ಚಿತ್ತ ಚಂಚಲವು

ಎತ್ತ ಹೋದರು ಬಿಡದು ಸಂಸಾರವು || 1     

ಪತಿತೋದ್ಧಾರ ಪರಮ ಪುರುಷ ನೀನು

ಗತಿ ಎಂದು ಬಳಿಗೆ ಬಂದವಳು ನಾನು

ಧರಣಿ ಪಾಲಕ ನಿನ್ನ ಹೋರತಿನ್ನೆನಿದೆ

ತರುಣಿಯ ಮೊರೆಯಾಲಿಸು ಶ್ರೀನಿಧೆ || 2    

ಭಾವದುರಿಯಲಿ ಬೇಯಲಾರೆನೋ

ಭವಸಾಗರದ ಭಯವ ತಾಳೆನೋ

ನೋವ ನೀಗಿಸುತ ದಾರಿ ತೋರಿಸು

ದೇವರ ದೇವ ಜಾಹ್ನವಿ ವಿಠಲ ಕರುಣಿಸು || 3