ಕೊಳಕು ಬುದ್ಧಿಯ ಬಿಡಿಸಿದೆ |
ಹುಳುಕು ಮನೆಕೆ ಔಷಧಿ ಹಚ್ಚಿದೆ |
ಬೆಳಗು ತೋರುತ ನಿ ನಡೆಸುತ್ತಿರುವೆ |
ಗುರು ರಾಘವೇಂದ್ರ || (ಪ)
ನಿನ್ನ ದರುಶನಕ್ಕೆ ಬರುವ ಭಕ್ತರ |
ಮನದಭಿಲಾಷೆ ಈಡೇರಿಸುವೆ ||
ಕಷ್ಟಗಳ ಕೊನೆಗಾಣಿಸಿ ಸುಖ ತೋರಿ |
ಬದುಕಿಗೆ ಆಸರೆಯಾಗಿ ನಿಲ್ಲುವೆ ||
ಕೊಳಕು ಬುದ್ಧಿಯ ಬಿಡಿಸಿದೆ. (1)
ಬೇಡಿದ್ದಲ್ಲ ನೀಡುವ ಮಂತ್ರಾಲಯದ ದೊರೆ, |
ನಾ ಬೇಡುತ್ತಾ ಬಂದೆ ನಿನ್ನ ಬಳಿಗೆ ||
ದಯ ತೋರಿ ನೀಡು ಅಭಯವಾ |
ದೂರ ಮಾಡು ಭಯವ ||
ಕೊಳಕು ಬುದ್ಧಿಯ ಬಿಡಿಸಿದೆ (2)
ನಿನ್ನ ಚರಣಾಮೃತದ ಮಹಿಮೆಯಿಂದ |
ಸರ್ವ ರೋಗ ದೂರಾಗುವದೆಂದು ||
ಸರ್ವ ಕಾಲಕ್ಕೂ ನಿನ್ನ ನಾಮಸ್ಮರಣೆ |
ಮಾಡಿ ಈ ಧರೆಯೋಳು ಧನ್ಯವಾಗಲೆಂದು ||
ಕೊಳಕು ಬುದ್ಧಿಯ ಬಿಡಿಸಿದೆ. (3)
ದುರುಳ ನವಾಬನ ಮನ ಪರಿವರ್ತನೆ ಮಾಡಿ |
ಮಂಚಾಲಯದ ನೆಲವ ನೋಡಿ ||
ಬರುವ ಭಕ್ತರಿಗೆ ವರ ಕೊಡುವ ನಿಂತ |
ನಮ್ಮ ಜಾಹ್ನವಿ ವಿಠಲನ ಪ್ರಿಯ ||
ಕೊಳಕು ಬುದ್ಧಿಯ ಬಿಡಿಸಿದೆ (4)