ಬಂದರೆ…. ರಾಘವೇಂದ್ರ ವೃಂದಾವನದಿಂದ |
ಭಕ್ತರನ್ನುದ್ದರಿಸಲು |
ಬಂದರೆ…. ರಾಘವೇಂದ್ರ ವೃಂದಾವನದಿಂದ (ಪ)
ಕಡು ಪಾಪದಿ ಬೇಯುವ ಭಕ್ತರ ಬೇಗೆ ನೀಗಿಸಲು |
ಭವದುರಿಯನು ತಣಿಸಿ ಸಂತೈಸಲು |
ನರಹರಿ ಪ್ರಿಯ ನಮ್ಮ ರಾಘವೇಂದ್ರ ||
ಬಂದರೆ…. ರಾಘವೇಂದ್ರ ವೃoದಾವನದಿಂದ (1)
ದುರಿತ ದುಃಖಗಳೆಲ್ಲ ಹೇಳದೆ ಹೋದವು |
ಮುನಿಪುಂಗವನು ಬರುವುದು ಕಂಡು |
ಕೇಶವನಾಮವ ಪಾಡುತ್ತ ರಾಘವೇಂದ್ರ ||
ಬಂದರೆ… ರಾಘವೇಂದ್ರ ಬೃಂದಾವನದಿಂದ (2)
ಶೇಷಾದ್ರಿ ವಾಸನ ನಿಜದಾಸ ಯೋಗೀಂದ್ರ |
ತುಂಗಾತೀರ ವಾಸ ರಾಘವೇಂದ್ರ |
ರಾಮನ ನಿಜ ದೂತನ ಜೊತೆಗೂಡಿ ||
ಬಂದರೆ… ರಾಘವೇಂದ್ರ ವೃಂದಾವನದಿಂದ (3)
ಹರಿಕೀರ್ತನೆಯ ಮಾಡುವ ಮನೆಯೇ ಬೃಂದಾವನವೆಂದು |
ಹರಿನಾಮವ ಜಪಿಸುವ ಮನುಜರೇ ನಿಜ ಭಕ್ತರೆಂದು |
ಜಹ್ನವಿ ವಿಠಲನ ಕರಸಂಜಾತ ||
ಬಂದರೆ…. ರಾಘವೇಂದ್ರ ವೃಂದಾವನದಿಂದ (4)














