ಮನೆ ದೇವರ ನಾಮ ಹಿಡಿಸುವುದುಚಿತವೇ ಕೃಷ್ಣ

ಹಿಡಿಸುವುದುಚಿತವೇ ಕೃಷ್ಣ

0

ಹಿಡಿಸುವುದುಚಿತವೇ ಕೃಷ್ಣಾ….

ಲೋಕದ ಜನರ ಪಾದಾ….

ಹಿಡಿಸುವುದುಚಿತವೆ ಕೃಷ್ಣಾ ….|| ಪ

ಸಾಕಲಾರದೆ ನನ್ನ ಬೇಸತ್ತೆಯಾ ಪ್ರಭುವೇ

ನೂಕಿ ಬಿಟ್ಟು ನೀನಿರುವೆಯಾ ವಿಭುವೆ

ಅನ್ಯರ ಪಾದಕ್ಕೆ ನೊಸಲ ನಾ ಚಾಚಿ

ಬೇಸತ್ತು ನಿನ್ನ ಬಳಿ ಬಂದಿರುವಾಗ

ಹಿಡಿಸುವುದುಚಿತವೆ ಕೃಷ್ಣಾ || 1

ತೃಣವಾಗಿ ಕಾಣುತಿಹರು ಈ ಜೀವವನು

ನೊಣದಂತೆ ಝಾಡಿಸಿ ಓಡಿಸುತಿಹರು

ಒಣ ಉಪಚಾರದ ಮಾತುಗಳಾಡುವರು

ದಣಿದೆ ನಾ ಈ ಲೋಕದ ಜನರೋಳು

ಹಿಡಿಸುವುದುಚಿತವೆ ಕೃಷ್ಣಾ || 2

ಕ್ರೂರ ಪಾಪಿಯಂದು ದೂರ ಮಾಡಬೇಡವೋ

ನಾರು ಹೂವಿನಂತೆ ನನ್ನ ನಿನ್ನ ಸ್ನೇಹವೋ

ಮೂರು ಲೋಕದ ತಂದೆ ನನಗೆ ನಿ ಬಂಧುವೋ

ತೋರೋ ದಯ ಜಹ್ನಾವಿ ವಿಠಲನ ಕರುಣಾ ಶಿಂಧೊ

ಹಿಡಿಸುವುದುಚಿತವೆ ಕೃಷ್ಣಾ || 3