ಮನೆ ದೇವರನಾಮ ಹಿಡಿದೆ ನಿನ್ನ ಪಾದ

ಹಿಡಿದೆ ನಿನ್ನ ಪಾದ

0

ಹಿಡಿದೆ ನಿನ್ನ ಪಾದ ಬೆಟ್ಟದೊಡೆಯ ವೆಂಕಟ

ಗಟ್ಟಿಯಾಗಿ ನೀನಿರುವಾಗ ಯಾಕೆ ನನಗೆ ಸಂಕಟ

ಹಿಡಿದೆ ನಿನ್ನ ಪಾದ….|| ಪ

ಬಾಳಿಗೆ ಅರ್ಥವಿಲ್ಲ ನಿನ್ನ ನಂಬದೆ ಹೋದರೆ

ನಾಳಿನ ಚಿಂತೆಯಿಲ್ಲ ನಿನ್ನ ನಂಬಿದ್ದೆಯಾದರೆ

ಗೋಳಾಡುವ ಭಯವಿಲ್ಲ. ರಂಗ ನೀನಿರುವಾಗ

ಕಳವಳ ಪರಿಹರಿಸಿ ನನ್ನ ನೀ ಕಾಯುವಾಗ

ಹಿಡಿದೆ ನಿನ್ನ ಪಾದ….|| 1

ಕಲಿಯುಗದ ಮಹಾ ಮಹಿಮನು ನೀನು

ನಲಿಯುವೆ ನಿನ್ನ ರೂಪ ಕಂಡು ನಾನು….

ಬಲವೆಲ್ಲ ನಿನ್ನ ನಾಮದ ಮಹಿಮೆಯಲ್ಲಿ

ನಲಿದೆ ನೀ ಭಕ್ತರ ಹೃದಯ ಮಂದಿರದಲಿ

ಹಿಡಿದೆ ನಿನ್ನ ಪಾದ …..|| 2

ಹತ್ತು ಹಲವು ನಿನ್ನ ರೂಪ

ನನ್ನ ಕಣ್ಣ ಮುಂದಿರಲಿ ಸತತ

ಮುತ್ತು ರತ್ನದಂತೆ ಅನರ್ಘ್ಯ

ಜಾಹ್ನವಿ ವಿಠಲ ನಿನ್ನ ನಾಮಾಮೃತ || 3