ಸೋಜಿಗವೆ ತುಂಬಿದ ಜಗವೆಲ್ಲ
ಮೋಜಿನದಾಟ ನಡೆಯುವುದು ಇಲ್ಲೆಲ್ಲ
ಬೆಟ್ಟದ ಮೇಲೆ ಎದ್ದಿದೆ ಗಿಡವೊಂದು
ತುಟ್ಟ ತುದಿಯಲಿ ಬಿಟ್ಟಿದೆ ಹೂವೊಂದು !!
ಬೆಟ್ಟದ ಗಿಡಕೆ ನೀರೆರದವರ್ಯಾರು ?
ಬೆಟ್ಟದ ಹೂವು ಒಡೆಯನು ದೇವರು
ಇಟ್ಟನು ಎಲ್ಲೆಡೆ ತಾನೀರುವ ಗುರುತು
ಕೊಟ್ಟನು ಸಂದೇಶ ಬಾಳದಿರು ಮರೆತು !!
ಆದಿ ಅನಾದಿಯಿಂದಲೂ ಇರುವನೊಬ್ಬ
ನದಿ ಸಾಗರ, ಗಿರಿ ತೊರೆಗಳ ಒಡೆಯನೊಬ್ಬ
ಸುಂದರ ಸೃಷ್ಟಿಯ ಅಂದದ ಅರಮನೆಯ
ಹಂದರ ಹಾಕಿಸುವ ರಸಿಕ ಶ್ರೀ ಹರಿಯು
ನೆನೆಯುತ ನಡೆದರೆ ಬಾಳೆ ಧನ್ಯ….
ಮನೆ ಮನ ಬೆಳಗಿಸುವ ಜಹ್ನವಿ ವಿಠಲ
ಬಲು ಮಾನ್ಯ !