ಅನುದಿನ ನಿನ್ನ ಭಜಿಸುತ
ಅನುಗಾಲ ನಿನ್ನ ನೆನೆಯುತ
ನಡುವೆ ನಾನು ಗುರು ರಾಘವೇಂದ್ರ ||
ಹಿತವೆಲ್ಲ ಇರುವುದು ನಿನ್ನ ನಾಮದಲ್ಲಿ
ಸುಖವೇನಿಸುವುದು ನಿನ್ನ ಚರಣಕಮಲದಲ್ಲಿ
ಬದುಕು ಸುಂದರವೆನಿಸಿ ಬಾಳುವೆ ನಾನು || 1
ನಿನ್ನ ಭಕುತನಿಗೆ ಇಲ್ಲವಂತೆ ನೋವು
ನಿನ್ನ ನಂಬಿದವರಿಗೆ ಕಾಮಧೇನು
ಕೈ ಹಿಡಿದು ನಡೆಸುವ ಯೋಗಿವರ್ಯ ನಿನ್ನ
ಸುತ್ತಿಸಿ ನಾ ಧನ್ಯ || 2
ಭಕುತರ ಚಿಂತಾಮಣಿ ಸುರದೇನು ನೀನು
ನಿನ್ನನ್ನೇ ನಂಬಿರುವ ಕೊನೆತನಕ ನಾನು
ಇಂಬಿಟ್ಟು ಸಲಹೆ ತೋರೋ ಜಹ್ನವಿ ವಿಠಲನ || 3