ನಾರಾಯಣ ಬಂದಾ | ನರಗೊಲಿದವ ಬಂದಾ
ಆನಂದ ಕಂದ ಬಂದಾ | ಗೋಪಿ ನಂದನ ಬಂದಾ |
ಬಾಲಕರೊಡಗೂಡಿ ಬೆಣ್ಣೆಯ ಮೆಲುತ
ಲೋಲ ಶ್ರೀ ಕೃಷ್ಣ ಗೋವುಗಳೊಡನೆ
ನಾರಾಯಣ ಬಂದಾ… || 1
ಕ್ರೂರ ಪೂತನಿಯ ಸ್ಥನವ ಹೀರುತ
ಸರಸರನೆ ಅವಳ ಯಮಸದನಕಟ್ಟಿದ
ನಾರಾಯಣ ಬಂದಾ…|| 2
ದುಷ್ಟ ಚಾಣೂರನ ಅಟ್ಟಿ ಕೆಡವುತ
ದಿಟ್ಟ ಬಾಲಕೃಷ್ಣ ನಗುತಾ ಬಂದಾ
ನಾರಾಯಣ ಬಂದಾ …|| 3
ಯಮುನಾ ನದಿಯಲಿ ಕಾಳಿಂಗ ತುಳಿಯುತ
ಕೋಳಲನೂದಿ ನಾಟ್ಯವ ಮಾಡಿದ
ನಾರಾಯಣ ಬಂದಾ…|| 4
ಧೀರ ವೇಣುಗೋಪಾಲ ರಾಧಾ ಲೋಲ
ಜಹ್ನವಿ ವಿಠಲನ ಇಂದು ಮನೆಗೆ ಬಂದಾ
ನಾರಾಯಣ ಬಂದಾ || 5















