ಮನೆ ದೇವರ ನಾಮ ಶ್ರೀ ರಾಘವೇಂದ್ರ

ಶ್ರೀ ರಾಘವೇಂದ್ರ

0

ಧನ್ಯ ಧನ್ಯಳನ್ನಾಗಿ ಮಾಡಿದೆ ಎನ್ನ,

ಆನಂದ ಕಂದ | ಶ್ರೀ ಮುಕುಂದ ಬಂಧು

ಶ್ರೀ ರಾಘವೇಂದ್ರ ಧನ್ಯ ಧನ್ಯಳನ್ನಾಗಿ ಮಾಡಿದೆ || ಪ

ನಿನ್ನಾಲಯಕೆ ಬಂದೆ ಬೇಡಿದ್ದೆಲ್ಲವ ನೀಡಿದೆ |

ನಿನ್ನ ಪಾದಪದ್ಮಗಳ ದರುಶನವ ನೀಡಿದೆ |

ಸುರ ಸುಧೀಂದ್ರ ವಿಖ್ಯಾತ ರಾಘವೇಂದ್ರ ||

ಧನ್ಯ ಧನ್ಯಳನ್ನಾಗಿ ಮಾಡಿದೆ || (1)

ಏಸು ಜನುಮದ ಪಾಪೌಗಳ ದೂರ ಮಾಡಿದೆ |

ಪರಮ ಪುನಿತ ನಿನ್ನ ದರುಶನವ ನೀಡಿದೆ |

ಧನ್ಯಳಾದೆ ತಂದೆ ನಿನ್ನಿಂದ ಈ ಜಗದಿ |

ಧನ್ಯ ಧನ್ಯಳಾಗಿ ಮಾಡಿದೆ || (2)

ಕರ್ಮ ಬಂಧನ ಬಿಡಿಸಿದೆ ನೀನು |

ಮುಕ್ತಿಗೆ ಮಾರ್ಗವ ತೋರಿದೆ |

ವರ ಜಹ್ನವಿ ವಿಠಲನ ಪ್ರೇಮ ಪಾತ್ರನೆ |

ಧನ್ಯ, ಧನ್ಯಳನ್ನಾಗಿ ಮಾಡಿದೆ || (3)