ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದ ವರ ಪಾಲಿನ ಕಲ್ಪ ತರು ನೀನೆ
ಭಾದ್ರಪದ ಶುಕ್ಲದಾ ಚೌತಿ ಯಂದು
ನೀ ಮನೆ ಮನೆಗೂ ದಯ ಮಾಡಿ ಹರಸು ಎಂದು
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ್ಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾ ಸಿಂಧು
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದ ವರ ಪಾಲಿನ ಕಲ್ಪ ತರು ನೀನೆ
ಈರೇಳು ಲೋಕದ ಅಣುವಣುವಿನಾ
ಇಹ ಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆನೋಟದಾ ಒಂದು ಹೊನ್ನ ಕಿರಣಾ
ನೀವಿದರೆ ಸಾಕಯ್ಯಾ ಜನ್ಮ ಪಾವನ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದ ವರ ಪಾಲಿನ ಕಲ್ಪ ತರು ನೀನೆ
ಪಾರ್ವತಿ ಪರ ಶಿವನಾ ಪ್ರೇಮ ಪುತ್ರನೆ
ಪಾಲಿಸುವಾ ಪರ ದೈವಾ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದ ವರ ಪಾಲಿನ ಕಲ್ಪ ತರು ನೀನೆ
Saval TV on YouTube