ಮನೆ ದೇವರನಾಮ ದಯೆ ತೋರಮ್ಮ ಶ್ರೀ ತುಳಸಿ ವರನೀಡಮ್ಮ

ದಯೆ ತೋರಮ್ಮ ಶ್ರೀ ತುಳಸಿ ವರನೀಡಮ್ಮ

0

ದಯೆ ತೋರಮ್ಮ ಶ್ರೀ ತುಳಸಿ ವರನೀಡಮ್ಮ

ಶ್ರೀ ತುಳಸಿ ದಯಮಾಡಮ್ಮ ಶ್ರೀ ತುಳಸಿ ನಿತ್ಯವು ಪೂಜಿಪೆ ವರ ತುಳಸಿ

ಇಂದಿರೆ ಸುಂದರಿ ವಂದಿಪೆ ಮಾಧವಿ ಶುಭವನು ಮಾಡೆ ಜಯ ತುಳಸಿ ||ಇಂದಿರೆ||

ವೃಂದಾವನವೆ ಮಂದಿರವಾಗಿದೆ ನಿಂದಿರೆ ಶ್ರೀತುಳಸಿ||ವ್ರಂದಾವನವೇ||

ನಂದನಂದನ ಮುಕುಂದಗೆ ಪ್ರಿಯಳಾದ ||2|| ಚೆಂದದ ಶ್ರೀ ತುಳಸೀ…. || ವೃಂದಾವನವೆ||

ತುಳಸಿಯ ವನದಲಿ ಹರಿ ಇಹನೆಂಬುದ ಶ್ರತಿಸಾರುತಿದೆ ಕೇಳಿ

ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ|

ತುಳಸಿ ಸ್ಪರ್ಶವ ಮಾಡೆ,ದೇಹ ಪಾವನವೆಂದು |

ತಿಳಿದುದಿಲ್ಲವೆ ಕೇಳಿ ತುಳಸಿ ಸ್ಮರಣೆ ಮಾಡಿ ,ಸಕಲ ಇಷ್ಟವ ಪಡೆದು | ಸುಖದಲಿ ನೀವು ಬಾಳಿ ||ವೃಂದಾವನವೆ||

ಮೂಲ ಮ್ರತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು

ಮಾಲೆ ಕೊರಳಲಿಟ್ಟ ,ಮುನುಜಗೆ ಮುಕುತಿಯ ಮಾರ್ಗವ ತೋರುವುದು |

ಕಾಲ ಕಾಲಗಳಲಿ ,ಮಾಡುವ ದುಷ್ಕರ್ಮ | ಕಳೆದು ಬಿಸಾಡುವುದು

ಕಾಲನ ದೂತರ ಕಳಚಿ ಕೈವಲ್ಯದ | ಲೀಲೆಯ ತೋರುವುದು

||ವೃಂದಾವನವೆ||

ಧರೆಯೊಳು ಸುಜನರ ಮರೆಯದೆ ಸಲಹುವ ,ವರಲಕ್ಷ್ಮಿ ಶ್ರೀ ತುಳಸಿ

ಪರಮ ಭಕ್ತರ ಘೋರ ಪಾಪಗಳ ತರಿದು ಪಾವನ ಮಾಡುವ ತುಳಸಿ |

ಸಿರಿ, ಆಯು, ಪುತ್ರಾದಿ ಸಂಪದಗಳನ್ನಿತ್ತು| ಹರುಷಗೊಳಿಪ ತುಳಸೀ…

ಪುರಂದರವಿಠ್ಠಲನ ಚರಣ ಕಮಲಗಳ | ಪುರಂದರವಿಠ್ಠಲನಾ……ಆ…ಆ… |

ಪುರಂದರವಿಠ್ಠಲನ ಚರಣ ಕಮಲಗಳ | ಸ್ಮರಣೆ ಕೊಡುವ ತುಳಸಿ

||ವೃಂದಾವನವೆ||