ಮನೆ ದೇವರ ನಾಮ ನನ್ನೊಡಯ ನೀನೆ

ನನ್ನೊಡಯ ನೀನೆ

0

ನೀನೆ ನೀನೆ ನನಗೆಲ್ಲವೂ ನೀನೆ

ನನ್ನೊಡೆಯ ಕೃಷ್ನ ನೀನೆ || ಪ

ಮರೆಯಲಾರೆನೋ ನಿನ್ನ

ಮರೆತೆಯಾದರೆ ಆದೀತು ಕರ್ಮ

ಮರೆತೆನೆಂದರೆ ಆದೀತು ಹೇಸಿ ಜನ್ಮ

ಮರೆಯದೆ ನಿನ್ನ ಭಜಿಸುವುದೆ ಧರ್ಮ

ನೀನೆ ನೀನೆ ….|| 1

ಸೋಕಿದಾಗ ಗಾಳಿಗೆ ತರು ಲತೆ ಬಳುಕಿದಂತೆ

ಉಕ್ಕಿ ಬರಲಿ ನಿನ್ನ ಮೇಲೆ ಭಕ್ತಿ ಕಡಲಂತೆ

ಹುಣ್ಣಿಮೆಯ ಶಶಿಯು ಬೆಲದಿಂಗಳ ತಂದಂತೆ

ಮಣ್ಣಿನಲಿ ಮಣ್ಣಾಗುವವರೆಗೆ ನೀ ಕಾಯಲು ಯಾಕೆ ಚಿಂತೆ

ನೀನೆ ನೀನೆ ….|| 2

ಸೊಕ್ಕಿನಿಂದ ಮೆರೆದರೆ ಭಕ್ತಿಯು ಬರದಲ್ಲ

ದಕ್ಕದು ಎಂದಿಗೂ ಹರಿ ಚರಣಗಳು

ಮುಕ್ತಿಯು ಬೇಕಾದರೆ ಧೃಡವಾಗಿ ನೀ ನಡಿ

ಭಕ್ತಿಗೆ ಒಲಿದು ಬರುವ ಜಾಹ್ನವಿ ವಿಠಲನ ಹಿಡಿ || 3