ದೊರೆಯದಣ್ಣ ಮುಕುತಿ ಅಣ್ಣಾ ದೊರೆಯಾದಣ್ಣ ಮುಕುತಿ ||
ಗುರುವಿನ ಗುಲಾಮನಾಗುವ ತನಕ ||
ದೊರೆಯದಣ್ಣ ಮುಕುತಿ ಅಣ್ಣಾ ದೊರೆಯಾದಣ್ಣ ಮುಕುತಿ |
ಗುರುವಿನ ಗುಲಾಮನಾಗುವ ತನಕ |
ಪರಿ ಪರಿ ಶಾಸ್ತ್ರವ ಓದಿದರೇನು ||
ವ್ಯರ್ಥವಾಯಿತು ಭಕುತಿ ||ದೊರೆಯಾದಣ್ಣ ||
ಆರು ಶಾಸ್ತ್ರವ ಓದಿರಲಿಲ್ಲ
ನೂರಾರು ಪುರಾಣವ ಮುಗಿಸಿದರಿಲ್ಲ ||
ಸಾರ ನ್ಯಾಯ ಕಥೆಗಳೇ ಕೇಳಿದರಿಲ್ಲ ||
ಧೀರನಾಗಿ ಪೇಳಿದರಿಲ್ಲ ||ದೊರೆಯಾದಣ್ಣ ||
ಕೊರಳೂಲು ಮಾಲೆ ಧರಿಸಿದರಿಲ್ಲ
ಬೆರಳೂಲು ಜಪಮಣಿ ಏಣಿಸಿ ದರಿಲ್ಲ ||
ಮರುಲನಾಗಿ ತಾ ಶರೀರಕ್ಕೆ ಬೂದಿ ||
ಒರೆಸಿಕೊಂಡು ತಾ ತಿರುಗಿದರಿಲ್ಲ ||ದೊರೆಯದಣ್ಣ ||
ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖ ಬಿಡಿಸಿದಿರಲ್ಲ ||
ನಾರದ ವರದ ಪುರಂದರ ವಿಠಲಾ ||
ಸೇರಿಕೊಂಡು ತಾ ಪಡೆಯುವ ತನಕ || ದೊರೆಯದಣ್ಣ ||