ಎಂತ ಸುಂದರ ಬೃಂದುತರ ಮನಸ್ಸು
ಏನೆಂದು ನಾ ಹೇಳಲಿ ಅದ ಹೇಗಿಂದು ನಾ ಹಾಡಲಿ ||
ಆಡಂಬರವು ಅಹಂಕಾರವು ಲವಲೇಷವಿಲ್ಲ
ತಂದೆ ಗಣಪ ನಿನಗೆಂದಿಗು ||
ನಿನದೆಂಥ ಸುಂದರ ಬೃದುತರ ಮನಸು ಏನೆಂದು ನಾ ಹೇಳಲಿ |
ಎಷ್ಟೋ ಸುಂದರ ಮಹಾನವಿರಲು
ಇಲಿಯನು ಕೋರಿದೆ ನೀನು ಆ ದಿನ ||
ಚಿಕ್ಕ ಜೀವಕು ಪ್ರೀತಿ ತೋರಿಸಿದೆ |
ಚಿಕ್ಕ ಜೀವಕು ನೀ ಪ್ರೀತಿ ತೋರಿಸಿದೆ |
ಸಮದೃಷ್ಟಿಗಿದೇ ನಿದರ್ಶನವು | ನಿನ್ನ ಸಮದೃಷ್ಟಿಗಿದೇ ನಿದರ್ಶನವು ||ಎಂಥ ||
ಬರಿ ಹುಲ್ಲು ಪತ್ರದ ಕಿರು ಪೂಜೆಗೊಲಿವೆ
ಕರುನಾಳು ಎಂದೋರ ಕಾಪಾಡುವೆ ||
ಸಾಮಾನ್ಯ ಕೊಡುವ ಕಾಣಿಕೆ ಗೊಲಿದು ||
ಸಂತೃಪ್ತಿ ಹೊಂದಿ ವರನೂರು ನೀಡುವೆ || ಎಂಥ ||














