ಮನೆ ದೇವರ ನಾಮ ಶ್ರೀಮಾನ್ ಮಹಾಮಂಗಾಳಾಕಾರ ಪಾಪವ್ಕ್ ಸಂಹಾರ

ಶ್ರೀಮಾನ್ ಮಹಾಮಂಗಾಳಾಕಾರ ಪಾಪವ್ಕ್ ಸಂಹಾರ

0

 ಶಿಷ್ಠಾತ್ಮ ಸಂಚಾರ ಸದ್ಭಕ್ತ ಮಂದಾರ  |

 ತವದಿವ್ಯ ಚಾರಿತ್ರವಾ ಭವ್ಯ ಲೀಲಾ ಮಹತ್ವವ|

 ನಾ ನಿತ್ಯ ಎದೆಯಾಳಂತರಾಳದೆ ನೆನೆಯುತ್ತ ಆನಂದಮಯನಾದೆ |

 ಕಾತ್ಯಾಯಿಣಿ  ಪುತ್ರ ಲೋಕತ್ರಯಸೋತ್ರ  ಸನ್ಮೋನಿ ಋತ್ತದ್ಮ ಮಿತ್ರಾ|

 ದಯಾಪಾತ್ರ ಕಲ್ಯಾಣ ಗಾತ್ರ ಶರಚಂದ್ರ ಸಂತೋಷ ವಕ್ರ| 

 ಸುರಾದ್ಯಕ್ಷ ಸಂಕೃತ್ಯ ಚರಿತ್ರಾ|

  ಶ್ರೀ ಪಾರ್ವತಿ ದೇವಿ ಅಭ್ಯಂಚನ ಮಾಡುವಂತಹ ಸದ್ವೇಳೆ|

 ಮಣ್ಣಿನಿಂದಲೇ ಆಕೃತಿ ಮಾಡಿ ಪ್ರಾಣವನ್ನು ತುಂಬಲು |

 ನಿನ್ನ ದಿವ್ಯಾವವತಾರವು  ಆಯಿತೋ ವಿಘ್ನೇಶ|

 ಸ್ಥಾನಕ್ಕೆ ಮುನ್ನ ಪ್ರವೇಶಕ್ಕೆ ನಿನ್ನ ಕಾವಲಿಗೆ ನಿಲ್ಲಿಸಿ |

 ಅನ್ಯಪ್ರವೇಶಕ್ಕೆ ತಡೆಮಾಡು ಎನುತ ಉಮಾದೇವಿ   |

 ಆಜ್ಞಾಪಿಸಿ ಸ್ಥಾನಕ್ಕೆ ಹೋಗಲು ಆಗಾ |

 ಕುಮಾರಿ ತಾನಲ್ಲಿಗೆ ಬರಲು ಗುರುತಿಸದೇ ಹೋಗಿ 

 ನೀನು ಪ್ರವೇಶಕ್ಕೆ ತಡೆಮಾಡಲು|

 ಶೂಲಿ ಕೋಪಾತಿರೇಕದಿ ನಿನ್ನ ಶಿರವನ್ನು ತುಂಡರಿಸೇ|

 ಕೌಮಾರಿ ಶೋಕದಲ್ಲಿ ನಿಂಗೆ ಪುನಾಜೀವನ ಬೇಡಿ ಪ್ರಾರ್ಥಿಸಲು|

 ಮಯೇಶ್ವರ ನಿಂಗೆ ಆಗ ಗಾಜಾಸ್ಯ ವನು ತಂದು 

 ಪ್ರಾಣವನ್ನು ತಂದು ನಿನಗಂದು|

 ಸೈನ್ಯಾಧಿ ಪತ್ಯವನ್ನು ತಾನಿತ್ತು ನಿಂಗ್ ಗ್ರ ಪೂಜೆ ಪ್ರಾರ್ಥಿಸಿದ  |   

 ಭಾದ್ರಪದ ಶುದ್ಧ ಚತುರ್ದದಿನ ಗಣಪ ನಿನ್ನ ವ್ರತ ಆಚರಿಸಿದೆ |

 ಈ ಸದ್ಬಕ್ತ ಕೋಟಿ ಸದಾ ನಿನ್ನು ಕಾಪಾಡಿ 

 ಕೈಗೂಡುವ ಕಾರ್ಯಕ್ಕೆ ಜಯ ನೀಡಿ|

 ವಿಘ್ನಗಳ ಭಗ್ನ ನೀ ಮಾಡಿ ಕೃಪೆ ಮಾಡು ತಂದೆ |

 ಭಕ್ತಾದಿ ಅರ್ಪಿಸುವ ಸಿಹಿ ಮೋಧಕ ಚಂಪಕಾದಿ ಸುಮ ಮಾಲಿಕ|

 ಕಡುಬು ಮತ್ತಿತರ ಭಕ್ಷಾಧಿ ನೈವೇದ್ಯ ಪಡೆದೂ|

 ಈ ಪೂಜೆ ದೆಸೆಯಿಂದ ನೀ ಹೊಂದಿ ಆನಂದ 

 ಸರ್ವ ಇಷ್ಟಾರ್ಥವ ತಂದು |ನೀ ಮೆರೆಯುತ್ತಿರುವೇ|

 ವಿಘ್ನೇಶ್ವರ ಶೂಲಧಾರಿ ಕುಮಾರ ನಮೋ ವಕ್ರತುಂಡ |

 ಗಳಜ್ಞಾನದಂಡ  ಸ್ಪೂರದ್ಬಾವುದಂಡ

 ಛಲಚಾರುಶುಂಡ ವಿಲದ್ ಬೃಂಗ ಶಂಡ |

 ಮಹತ್ ದಂತಕಾಂಡ ಕೋಣತ್ ಪಾದತಂಡ

 ವಿಪತ್ ಕೋಟಿಕಂಡ ಶಿವಪ್ರೇಮ ಚಂಡ|

 ಸದಾನಂದ ಮೂರ್ತಿ ಮಹಾ ಭೂತವರ್ತಿ

 ವರನಂತಸತ್ ಕೀರ್ತಿ ಏ ದೇವತ ಚಕ್ರವರ್ತಿ|  

 ಬಾವನ್ ಮೂರ್ತಿ ಮಣ್ಮಾನ ಸಂಭೋರು

 ಹದೇ ನಿನ್ನ ಸ್ಥಾಪಿಸಿ ಧ್ಯಾನಿಸುತ್ತಿರುವೆ |

 ಅಜ್ಞಾನ ಎಂಬಂತ ಇರುಳನ್ನು ಮಾಯವನು

 ನಿರ್ಮೂಲನ ಮಾಡು ಏ ದೇವಾ |

 ಲಂಭೋದರ ಸರ್ವವಿಶ್ವಂಭರಧಾರ

 ಓಂಕಾರ ಸಾರ ಜಗದೇತುಕಾರ ದಯಾಪುರ ತುಂಭ್ಯ|

 ನಮಸ್ತೆ ನಮಸ್ತೆ ನಮಸ್ತೇ ನಮಃ   |

ಹಿಂದಿನ ಲೇಖನವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ನೇರ ಹೊಣೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಅಲ್ಸರ್: ಜಠರದ ಹುಣ್ಣು