ಮನೆ ದೇವರನಾಮ ನಿನ್ನ ಸ್ಮರಣ ಲೀಲ ಶ್ರವಣ

ನಿನ್ನ ಸ್ಮರಣ ಲೀಲ ಶ್ರವಣ

0

 ನಿನ್ನ ಸ್ಮರಣ ಲೀಲಾ ಶ್ರವಣ ನನ್ನ ರಾಧನ ಸನಾತನ ||

 ತವಗುಣ ಕೀರ್ತನ ನಿತ್ಯವು ಈ ಮನ ||

 ಗಾನವ ಮಾಡಿದೆ ಗಜಾನನ ||

 ತವಗುಣ ಕೀರ್ತನ ನಿತ್ಯವು ಮನ |ಗಾನವ ಮಾಡಿದೆ ಗಜಾನನ ||ನಿನ್ನ||

 ತವ ಸನ್ನಿಧಿಯಲ್ಲಿ ಚಿಂತೆಯ ನೀಗಿ

 ಪದ ಸೇವೆಯಲ್ಲಿ ಪರವಶನಾಗಿ ||

 ಅರ್ಚಿಸುತ ಮನ ಅರ್ಪಿಸುತ್ತ ||

 ದಾಸನು ನಾನಾದೆ ದಯಾಗಣ ||ನಿನ್ನ ||

 ತಂದೆಯ ನಿನ್ನಲಿ ಬೆರೆಯಲು ನಾನಿಲ್ಲಿ

 ಆತ್ಮ ನಿವೇದನ ಮಾಡುವೆ ನಾ ||

 ಕರುಣಿಸಿ ಭಕ್ತಿ ನೀಡು ನೀ ಮುಕ್ತಿ ||

 ಸೇವಕಗೆ ಓ ದೀನವನ   ||ನಿನ್ನ||