ಎಂಥ ಅಂದ ಏನಿದು ಚೆಂದ ನಿನ್ನ ಸನ್ನಿಧಿ
ಇಲ್ಲಿ ತುಂಬಿ ಮೆರೆದಿದೆ. ಭಾಗ್ಯವಾರಿದಿ ||
ಪೂರ್ಣ ಚಂದ್ರ ಬಿಂಬದ ಹದಿನಾರು ಕಲೆಗಳು
ಶೋಧಿಸಿದೆ ಒಮ್ಮೆ ಶಿವೆ ನಗೆಯ ಬೀರಲು ||
ಅರ್ಧ ಚಂದ್ರ ಮೂಕುಟದಲ್ಲಿ ಇಣುಕಿ ನೋಡಲು ||
ಇರುಳು ಹೋಡಿ ಹೋಯಿತು ಇಲ್ಲವಾಗಲು ||ಎಂಥ ||
ನನ್ನ ಪೂರ್ಣ ಪುಣ್ಯದ ಕಡಲು ಉಕ್ಕಿತು
ಧನ್ಯ ನೀ ಎಂಬ ನಂಬೋ ವಾಣಿ ನುಡಿಯಿತು ||
ತಾಯ ಒಲುಮೆ ದೊರಕೀತೀಗ ಕರ್ಮ ನೀಗಿತು ||
ಕರ್ಪೂರದಲ್ಲಿ ತಾನು ಸುಟ್ಟು ಮಾಯವಾಯಿತು ||
ಮಾಯವಾಯಿತು ||ಎಂಥ||
ನನ್ನ ತಾಯಿ ಒಲುಮೆಯ ಹೊಂದಿದ ಮೇಲೆ ||
ಎಂದೆಂದಿಗೂ ಎಲ್ಲೆಲ್ಲಿಯೂ ವಿಜಯ ಮಾಲೆ ||
ನಿತ್ಯ ಸತ್ಯ ಲೋಕದಲ್ಲಿ ಭಾಗ್ಯ ಲೀಲೇ ||
ದಿವ್ಯ ಭವ್ಯ ಭಾವದ ಉಯ್ಯಾಲೆ ||ಎಂಥ||