ಮನೆ ದೇವರನಾಮ ನಮ್ಮಮ್ಮ ಶಾರದೆ ಉಮಾ:-

ನಮ್ಮಮ್ಮ ಶಾರದೆ ಉಮಾ:-

0

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹ ನಾನಮ್ಮ||
ತಮ್ಮ ಗೋಲನ ವೈರಿ ಸುತನಾದ
ಸೊಂಡಿಲ ಹೆಮ್ಮೆಯ ಗಣನಾಥನೆ || 2 || || ನಮ್ಮಮ್ಮ ||

ಮೋರೆ ಕಪ್ಪಿನ ಭಾವ ಮೊರ ದಗಲದ ಕಿವಿ
ಕೋರೆದಡಿಯ ನಾನ್ನಮ್ಮ ||
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರತ ಗಣನಾಥನೆ || ನಮ್ಮಮ್ಮ||

ಹುಟ್ಟ ಪಟ್ಟೆಯ ಬಿಗಿದುಟ್ಟು ಚೆಲ್ಲಣದ
ದಿಟ್ಟತ ಇವನಾರಮ್ಮಾ ||
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೆ ||ನಮ್ಮಮ್ಮ ||

ರಾಶಿ ವಿದ್ಯೆಯಬಲ್ಲ ರಮಣಿ
ಅಂಬಲನೊಲ್ಲ
ಭಾಷಿಗನಿವನಾರಮ್ಮ||
ಬೇಸಾಗಿ ಜನರ ಸಲುವುವ
ನಮ್ಮ ಕಾಗಿನೆಲೆಯಾ ಕೇಶವ ದಾಸ ಕಾಣೆ || ನಮ್ಮಮ್ಮ ||