ಮನೆ ದೇವರ ನಾಮ ಈ ಕಾಡಿಗೆ ಏಕೆ ಬಂದೆ

ಈ ಕಾಡಿಗೆ ಏಕೆ ಬಂದೆ

0

ಈ ಕಾಡಿಗೇಕೆ ನೀ ಬಂದೆ ಸ್ವಾಮಿ
ಈ ದಾರಿಯಲ್ಲಿ ಹೇಗೆ ನಡೆದೇ ಸ್ವಾಮಿ ||

ಈ ಕಲ್ಲು ಈ ಮುಳ್ಳು ಈ ಹಳ್ಳ ಈ ದಿಣ್ಣೆ
ಆಯಾಸ ನನ್ನ ತಾಳೆನಾಲ್ಲಾ ||
ತಂಪಾದ ಗಾಳಿಯಲೂ ಮೈ ಬೆವರುತ್ತಿದೆಯಲ್ಲ
ಅಯ್ಯಪ್ಪ ಸಾಕಾಯಿತಲ್ಲ ||
ಸ್ವಾಮಿ ಅಯ್ಯಪ್ಪ ಸಾಕಾಯಿತಲ್ಲ ||ಈ ಕಾಡಿಗೇಕೆ ||

ಆನೆಗಳು ಇಲ್ಲೆಲ್ಲಾ ಓಡಾಡುತಿವೆ ಯಲ್ಲ
ದೂರದಲ್ಲಿ ಹುಲಿ ಕೂಗಿತಲ್ಲ ||
ಗಂಡೆದೆಯ ಗುಂಡಿಗೆಯು ಕ್ಷಣಕಾಲ ತತ್ತರಿಸಿ |
ಕಣ್ಣೆಲ್ಲ ಮಂಜಾಯಿತಲ್ಲ ||
ನನ್ನ ಕಣ್ಣೆಲ್ಲ ಮುಂಜಾಯಿತಲ್ಲ || ಈ ಕಾಡಿಗೇಕೆ ||

ನನ್ನಲ್ಲಿ ನಿನ್ನನ್ನು ಕಾಣುವಾಸೆಯ ತಂದು
ನೀ ಕಾಣದಾಗಿ ಎಲ್ಲಿರುವೆ ||
ಕೂಗಲು ಉಸಿರಿಲ್ಲ ಅಳುವ ಶಕ್ತಿಯು ಇಲ್ಲ |
ದಾರಿ ತೋರೋ ಬೇಗ ಪ್ರಭುವೇ ||
ನನಗೆ ದಾರಿ ತೋರೋ ಬೇಗ ಪ್ರಭುವೇ ||ಈ ಕಾಡಿಗೇಕೆ ||

ಹಿಂದಿನ ಲೇಖನಚಿಕ್ಕಅಂಕನಹಳ್ಳಿ ಕೊಲೆ ಪ್ರಕರಣ: ಅಪರಾಧಿಗಳಿಗೆ ಜೈಲು ಶಿಕ್ಷೆ
ಮುಂದಿನ ಲೇಖನಋತುಸ್ರಾವ