ಪಂಚವರ್ಣ ಗಿಳಿಯೆ ಮಾತನಾಡುವ ಬಾ
ಪಂಚಾಂದ್ರಿನಾಥನ ಮಹಿಮೆ ತಿಳಿಸು ಬಾ ||
ಶಬರಿ ಗಿರಿಯ ಮೇಲೆ ನೀನು ಹಾರಿ ಬರುವ ವೇಳೆ
ಅಯ್ಯಪ್ಪನ ಸನ್ನಿಧಿಯ ನೀನು ಕಂಡೆಯ ||
ಪಂಪ ನದಿಯಲ್ಲಿ ನೀ ನೀಯುವ ವೇಳೆ |
ಪಂಚಭೂತ ನಾಥನ ಪಾದ ತೊಳೆದೆಯ || ಪಂಚವರ್ಣ ||
ಪಟ್ಟಬಂಧನದಲ್ಲಿ ಕುಳಿತ ಪ್ರಭುವಿನ ಮೊಗದಿ
ಮಕರ ಜ್ಯೋತಿಯ ಕಾಂತಿಯಿಹುದು ನೀ ಕಂಡೆಯ ||
ಹರಿಹರಾತ್ಮಜ ಇರುವ ಆಲಯಕೆಂದು
ಹದಿನೆಂಟು ಮೆಟ್ಟಿಲನು ಹತ್ತಿ ಬಂದೆಯ || ಪಂಚವರ್ಣ ||
ಭಕ್ತಿಯಿಂದ ಬಂದವರ ಇಷ್ಟ ಬೇಡಿಕೆ
ಈಡೇರಿದ ಸುದ್ದಿಯನ್ನು ನೀನು ಹೇಳು ಬಾ ||
ಭಕ್ತಕಂಠ ಇಂಚರದ ನಾದ ವೈಭವ
ಸ್ವರ್ಗದಲ್ಲಿ ಕೇಳಿದುದ ನಮಗೆ ತಿಳಿಸು ಬಾ || ಪಂಚವರ್ಣ ||
ಸ್ವಾಮಿ ಒಡಲ ಮೇರೆಸುವಂಥ ವಜ್ರ ಮಾಲೆಯು
ಕಣ್ಣು ಕೋರೈಸುವುದ ನಮಗೆ ಹೇಳು ಬಾ ||
ಸ್ವಾಮಿ ಕೀರ್ತಿ ಹಾಡಿ ನಿನ್ನ ಮನದಲಿ ಬಂದಾ
ನೆಮ್ಮದಿಯು ಏನೆಂದು ಇಂದು ತಿಳಿಸು ಬಾ || ಪಂಚವರ್ಣ ||