ಮನೆ ದೇವರನಾಮ ಶೃಂಗಾರ ರೂಪನು ಷಣ್ಮುಖನು

ಶೃಂಗಾರ ರೂಪನು ಷಣ್ಮುಖನು

0

ಶೃಂಗಾರ ರೂಪನು ಶಣ್ಮುಖನು ||
ಬಂಗಾರದೊಡಲಿನ ಕರುಣಾಂತರಂಗನು |
ತಂಡಯುಧವನು ಧರಿಸಿದ ಸ್ವಾಮಿಯು |
ಧರ್ಮದ ಕಾಯುವ ಕಂಕಣ ಭದ್ರನು || ಶೃಂಗಾರ ||

ಪಾರ್ವತಿ ಪ್ರೇಮದಿ ಹರಸಿದ ಕುವರನು
ಪರಶಿವ ಮೆಚ್ಚಿದ ಪಂಡಿತನು ||
ಪಾಪವ ನೀಗುವ ಪರಮ ಪುನೀತನು ||
ಪ್ರಣವರ ಹಾಸ್ಯವ ಬಲ್ಲವನೀತನು || ಶೃಂಗಾರ ||

ಗಂಗೆಯು ಸಹಿಸದ ಬೆಂಕಿಯ ಒಡಲು
ಅಂತರಂಗವಿದು ಪ್ರೇಮದ ಕಡಲು||
ಆನಂದ ಮೂರುತಿ ನಗು ನಗುತಿರಲೂ ||
ಕೈಲಾಸ ಭುವಿಯಲ್ಲೆ ಯಾವಾದರೂ || ಶೃಂಗಾರ ||

ಹಿಂದಿನ ಲೇಖನಕರ್ನಾಟಕ ರಾಜ್ಯ ಆಹಾರ ಆಯೋಗದಿಂದ ನಂಜನಗೂಡು ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ಪರಿಶೀಲನೆ
ಮುಂದಿನ ಲೇಖನಕುಷ್ಠರೋಗ