ಮನೆ ದೇವರ ನಾಮ ಶಬರಿ ಗಿರಿಯ ಕರುಣೆಯಿಂದ

ಶಬರಿ ಗಿರಿಯ ಕರುಣೆಯಿಂದ

0

ಶಬರಿ ಗಿರಿಯ ಕರುಣೆಯಿಂದ ಪುಣ್ಯ ಭೂಮಿಯ ಮಾಡಿದೆ
ಪುಣ್ಯ ಹಂಚಲು ಭಕ್ತ ಜನರ ನಿನ್ನ ಕಾಣಲು ಕೂಗಿದೆ ||

ಹೆಜ್ಜೆ ಇಡುವ ಹಾದಿಯಲ್ಲಿ ಕಲ್ಲು ಮುಳ್ಳು ತುಂಬಿದೆ |
ನಡೆಯುವಾಗ ಅಯ್ಯೋ ಸ್ವಾಮಿ ಎನ್ನುವಂತೆ ಮಾಡಿದೆ |
ಕ್ಷಣವು ಕೂಡ ನಿನ್ನ ಮರೆಯದೆ ಜಪಿಸುವಂತೆ ಮಾಡಿದೆ |
ಸುಲಭದಲ್ಲಿ ಪಾಪ ಕಳೆಯೋ ದಾರಿಯನ್ನು ತೋರಿದೆ || ಶಬರಿ ||

ನಿನ್ನ ಮಹಿಮೆಯ ನಿನ್ನ ಶಕ್ತಿಯ ಯಾರು ಬಲ್ಲರು ಧರೆಯಲಿ
ಕಡಲ ನೀರನು ಅಳೆವ ಧೀರರು, ಹುಟ್ಟ ಬಲ್ಲರ ಬುಮಿಯಲ್ಲಿ ||
ಎಲ್ಲೋ ದೂರದ ಗಿರಿಯ ಮೇಲೆ ಗುಡಿಯ ಒಳಗೆ ಕುಳಿತಿಹೆ |
ಎಲ್ಲರ ಮನದಲ್ಲಿ ನಿನ್ನ ನೆನಪ ತುಂಬಿ ಸೆಳೆಯುವೆ || ಶಬರಿ ||

ಸ್ವಾಮಿ ಶರಣಂ ಎಂದರೊಮ್ಮೆ ಏನು ಹರುಷ ಮನದಲಿ |
ನಿನ್ನ ಹೆಸರುನ್ನು Individual ಏನೊ ಉರುಪು ಎದೆಯಲಿ |
ನೀನೇ ಕರೆಯುವೆ ಕರೆಸಿಕೊಳ್ಳುವೆ ಬರುವ ಶಕ್ತಿಯ ನೀಡುವೆ |
ನಿನ್ನ ಪಾಪವ ಪಾದ ದರುಶನ ನೀಡಿ ನೀನೆ ಕಳುಹಿಸುವೆ || ಶವರಿ ||