ರಾಂ ರಾಂ ರಾಂ ರಾಂ ರಾಂ ರಾಂ |
ಬೆರೆಸೊ ಉಸಿರಲ್ಲಿ ರಾಮನ
ಸ್ಮರಿಸೊ ಅನುಕ್ಷಣ ರಾಮನ ||
ರಾಮ ರಾಮ ರಾಮಾ ಎಂದರೆ ಸಾಕು
ಕಷ್ಟವು ಬಳಿಬರದಲ್ಲ
ರಾಮ ರಾಮ ರಾಮಾ ಎನ್ನದೆ ನೀನು
ನೆಮ್ಮದಿಯ ಶಾಂತಿಯು ಇಲ್ಲ ||
ರಾಮ ರಾಮ ರಾಮಾ ಎಂದರೆ ಸಾಕು
ಕತ್ತಲೆ ಬಾಳಲ್ಲಿ ಇಲ್ಲ ||
ರಾಮ ರಾಮ ರಾಮಾ ಎನ್ನದೆ ನೀನು
ಚಿಂತೆಯು ಹೋಗುವುದಿಲ್ಲ ||ಬೆರೆಸೊ ||
ಹೂವಲ್ಲಿ ಕಂಪು ತುಂಬಿದ ಹಾಗೆ
ಮನದಲ್ಲಿ ರಾಮನ ತುಂಬಿ
ಹೂವಲಿ ಜೇನು ತುಂಬಿದ ಹಾಗೆ
ಹೃದಯದಿ ರಾಮನ ತುಂಬಿ ||
ನೀರನ್ನು ಮೀನು ನಂಬಿದ ಹಾಗೆ ||
ರಾಮನ ಪಾದವ ನಂಬಿ |
ಬಾಳದೆ ಹೋದರೆ ನರಳುವೆ ಕೊನೆಗೆ
ಬದುಕಲಿ ವೇದನೆ ತುಂಬಿ || ಬೆರೆಸೊ ||
ರಾಮ ರಾಮ ರಾಮ ರಾಮ ರಾಮ ರಾಮ