ಮನೆ ದೇವರನಾಮ ಗಾಣಗಪುರಕ್ಕೆ ಹೋಗದ ಈ

ಗಾಣಗಪುರಕ್ಕೆ ಹೋಗದ ಈ

0

ಗಾಣಗಪುರಕ್ಕೆ ಹೋಗದ ಈ ಕಾಲುಗಳೇಕೆ
ಗಾಣಗಪುರದ ನೋಡದ ಈ ಕಣ್ಣುಗಳೇಕೆ ||

ಭೀಮ ಅಮರಜ ಸಂಗಮದಿ ನೀಯದ
ತನುವೇಕೆ ಈ ತನುವೇಕೆ ||
ಶ್ರೀ ಗುರು ದೇವನ ಸ್ಮರಣೆಯ ಮಾಡದ ||
ಮನವೇಕೆ ಮನವೇಕೆ ||ಗಾಣಿಗಾಪುರಕ್ಕೆ ||

ಔಂದುಂಬರಕ್ಕೆ ಪೂಜೆಯ ಮಾಡದ
ಕರವೇಕೆ ಈ ಕರವೇಕೆ
ನಿರ್ಗುಣ ಪಾದುಕೆಯ ಮಹಿಮೆಯ ಅರಿಯಾದ
ಬದುಕೇಕೆ ಈ ಬದುಕೇಕೆ ಗಾಣಗಾಪುರಕ್ಕೆ

ಅತ್ರಿಯ ಪುತ್ರನ ಚರಿತೆಯ ಕೇಳದ
ಕಿವಿಯೇಕೆ ಈ ಕಿವಿಯೇಕೆ ||
ದತ್ತಾತ್ರೇಯ ಮಹಿಮೆಯ ಹಾಡದ ||
ನಾಲಿಗೆಯೇಕೆ ಈ ನಾಲಿಗೆಯೇಕೆ ||ಗಾಣಗಪುರಕ್ಕೆ ||

ಹಿಂದಿನ ಲೇಖನನಿಗಮ ಮಂಡಳಿಗಳಿಗೆ ನಿರ್ದೇಶಕರು,ಸದಸ್ಯರ ಆಯ್ಕೆಗೆ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚನೆ
ಮುಂದಿನ ಲೇಖನಕೆಮ್ಮಿದಾಗ ರಕ್ತ ಬೀಳುವುದು