ರಾಮಾ ರಾಮಾ ಶ್ರೀ ರಾಮಾ ಜಯ ರಾಮಾ |
ಎಲ್ಲಿದೆ ಆ ಪಾದ ಎಲ್ಲಿದೆ ಆ ಪಾದ||
ಕಲ್ಲಿಗೆ ಜೀವಾ ತುಂಬಿದ ಶ್ರೀಪಾದ
ಹನುಮನು ನಂಬಿದ ರಾಮನ ಪಾದ || ಎಲ್ಲಿದೆ ಆ ಪಾದ ||
ಬಾಳಲಿ ಒಮ್ಮೆ ಕಂಡರೆ ಸಾಕು
ಕಣ್ಗಳ ತುಂಬಾ ತುಂಬಲಿ ಸಾಕು ||
ಕೈಗಳು ಒಮ್ಮೆ ಮುಟ್ಟಲಿ ಸಾಕು||
ಆನಂದವೆ ಎಂದೆಂದಿಗೂ || ಸಾಕು ಎಲ್ಲಿದೆ ಆ ಪಾದ ||
ಕಂಬನಿ ಇಂದ ಪಾದವ ತೊಳವೆ
ಮಾನವನೆ ಮಲ್ಲಿಗೆ ಮಾಡಿ ಇಡುವೆ ||
ಕಣ್ಣಿನ ಬೆಳಕಲ್ಲಿ ಆರತಿ ಮಾಡಿ ||
ಚರಣದಿ ಶಿರವನ್ನು ನಾನಿಡಬೇಕು ||ಎಲ್ಲಿದ ಆ ಪಾದ||