ಮನೆ ದೇವರ ನಾಮ ಯಾತ್ರೆಗೆ ಹೋಗೋಣ ಬನ್ನಿ

ಯಾತ್ರೆಗೆ ಹೋಗೋಣ ಬನ್ನಿ

0

ಯಾತ್ರೆಗೆ ಹೋಗೋಣ ಬನ್ನೀರಿ || 2 ||
ಮೈಲಾರದ ಜಾತ್ರೆಯ ನೋಡ ಬನ್ನೀರಿ
ಯಾತ್ರೆಗೆ ಹೋಗೋಣ ಬನ್ನೀರಿ
ಬಂಡಲ್ಲ ಬಂಡಾರವೆ
ಮೈಲಾರದ ಗುಡಿಮುಂದೆ ಸಿಂಗಾರವೆ || 2 || || ಯಾತ್ರೆ ||

ಹೊಂಬಾಳೆ ಹೊನ್ನೆಲ್ಲವು ಜೋ ಲಾಡುತಾವೆ
ಯಾಲಕ್ಕಿ ಗೊನೆ ಬಾಳೆಯು ||
ಸಂಪಿಗೆಯ ಸೊಂಪಿನ ತೆನೆ ತಂಪಾದಲ್ಲಿ |
ಕಂಪಾಗಿ ಕೊನೆರುತಾವೆ ತ
ಹಾಲು ಹಾಲಿನ ಕೆನೆಯಲ್ಲಿ
ನಿಂಗಣ್ಣನ್ನು ತೆಲುತಾನೆ ಬೆಣ್ಣೆಯಂದದಿ ||
ಮಾಣಿಯರಿಬ್ಬರೊಡನೆ ಮೈಲಾರಯ್ಯ ||
ಲೀಲೆಯಾಡೂತ್ತಾನೆ || ಯಾತ್ರೆ ||

ಕೋರಿ ನೀಶಾನೆ ಹೊತ್ತಾನೆ ಮೈಲಾರದೇವ
ಮಾರಿಯ ಮುದ್ದು ಗೈದನೆ ||
ದೋಣಿತ್ರಿಶೂಲ ಹಿಡಿದನೆ ಗುಡ್ಡದ್ದಯ್ಯ |
ಡಮರುಗವ ನುಡಿಸಿ ನಿಂದನೆ
ಮಣಿಕಟ್ಟಿನ ಶಸ್ತ್ರ ನೋಡಿರಿ |
ಆರತಿಯ ಬೆಳಗುವಂ ಬೆಳಕ ನೋಡಿರಿ ||
ಕರುಣೆ ಹೊಳೆ ಹರಸುತಾನೆ ಮೈಲಾರಯ್ಯ ||
ಮುರುಳನನು ಹರಸುತಾನೆ ಮೈಲಾರ ಲಿಂಗ || ಯಾತ್ರೆ |

ಹಿಂದಿನ ಲೇಖನಕೇಂದ್ರ ನಾಯಕರಿಗೆ ಬಿಜೆಪಿಯವರೆಷ್ಟು ಕಾಣಿಕೆ ನೀಡಿದ್ದರು:ಚಲುವರಾಯಸ್ವಾಮಿ ಪ್ರಶ್ನೆ
ಮುಂದಿನ ಲೇಖನಕಲೆಗಳ ಮುಖ