ಕಂಡೇ ನಾ ಕಂಡೆ || 3 ||
ದತ್ತನ ಪಾದಗಳ ಶ್ರೀ ಗುರು ದತ್ತನ ಪಾದಗಳ ||
ವೇದಪುರುಷನ ವೇದಾತೀತನ ವಾದಕೆ |
ಸಿಲುಕದ ಸ್ವಾಮಿ ಪಾದಗಳ ಕಡೇ ||
ಅತ್ತವತಾರವ ಎತ್ತಿದ ದೇವನಾ
ಸತ್ಯ ಸ್ವರೂಪನ ನಿತ್ಯ ಶುದ್ಧನಾ ||
ಮತ್ತೆ ಮತ್ತೆ ಧರೆಗಿಳಿದು ಬಂದು ||
ಘನ ತತ್ವವ ತಿಳಿಸಿದ ಸದ್ಗುರು ಪಾದವ || ಕಂಡೇ ||
ದರುಶಣ ಮಾತ್ರದಿಂದ ಕರುಣೆಯ ತೋರುವಾ
ಘೋರ ಪಾಪಗಳ ಕ್ಷಣದಿ ಕಳೆಯುವ ||
ಶರಣು ಗುರುವ ಎಂದೆನಲು ಬರುವ ||
ನಿಜ ಭಕ್ತರ ಸಲಹುವ ದೇವನ ಪಾದಗಳ || ಕಂಡೆ ||
ಶ್ರೀ ಪಾದ ಶ್ರೀ ವಲ್ಲಭರಾಯ
ಶ್ರೀ ನರಸಿಂಹ ಸರಸ್ವತಿ ಯತಿಗಳ ||
ಅತ್ತ್ರಿಋಷಿಯ ವರಪುತ್ರನಾದ ||
ಗುರುದತ್ತರಾಜನ ಪಾವನ ಪಾದವ || ಕಂಡೆ ||