ಶ್ರೀ ರಾಮ ಜಯರಾಮ ಶ್ರೀ ರಾಮ ರಘುರಾಮ ||
ರಾಮ ರಾಮ ಎಂದರೆ ಸಾಕು ಮೈನೆದಿರೇಳುವುದು
ರಾಮ ರಾಮ ಎಂದರೆ ಸಾಕು ಮನಸು ಕುಣಿಯುವುದು ||
ರಾಮ ರಾಮ ಎಂದರೆ ಸಾಕು ಕಂಬನಿ ತುಂಬುವುದು ||
ತುಂಬಿದ ಆನಂದ ತಾಳಲಾರದೆ Posts ಬಿಗಿಯುವುದು || ಶ್ರೀರಾಮ ||
ರಾಮ ರಾಮ ಎಂದರೆ ಸಾಕು ಹೃದಯವು ಅರಳುವುದು
ರಾಮ ರಾಮ ಎಂದರೆ ಸಾಕು ಕತ್ತಲು ಕರಗುವುದು ||
ರಾಮ ರಾಮ ಎಂದರೆ ಸಾಕು ಚಂದ್ರಿಕೆ ಚೆಲ್ಲುವುದು ||
ಆ ಚಂದ್ರಿಕೆಯಲ್ಲಿ ರಾಮಚಂದ್ರನ ||
ಹೂ ನಗೆ ಕಾಣುವುದು || ಶ್ರೀರಾಮ ||