ಯೋಗಿಗಳ ಹೃದಯದಲಿ ಅನವರಥವಾಸಿಸುವ |
ಗಾಯಕರ ಕಂಠದಲ್ಲಿ ಮನೆ ಮಾಡಿ ಕುಡಿತಿರುವ |
ಕವಿಯ ವನವನು ಸೇರಿ ಕಲ್ಪನೆಯ ತರುತಿರುವ
ಶಾರದೆ ನೀನಿಲ್ಲದೆ ಈ ಅಂದಕಾರವು ಕರಗಿ ಬೆಳಕಾಗದೆ
ಶಾರದೆ ಶಾರದೆ ನೀ ನೋಡದೆ
ಅರಿವು ಹರಳುವುದೆ
ಶಾರದೆ ನೀ ಹರಸದೆ
ಬಾಳು ಬೆಳಗುವುದೇ ಶಾರದೆ
ಶಾರದೆ ನೀ ಅರಸದಿ
ಸಾರದೆ ನೀ ಹರಸದೆ ಬಾಳು ಬೆಳಗಾಗುವುದೇ
ಶಾರದೆ ನೀ ಒಲಿಯದೇ
ಕಲೆಯು ಒಲಿಯುವುದೇ
ಶಾರದೆ ನೀ ನಲಿಯದೆ
ಸವಿ ಮಾತು ಕೇಳುವುದೇ ಶಾರದೆ
ಶಾರದೆ ನೀ ನುಡಿಸದೇ
ವೀಣೆ ನುಡಿಯುವುದೆ
ಶಾರದೆ ನೀ ಹಾಡದೇ
ಸಂಗೀತ ಕೇಳುವುದೇ
ಶಾರದೆ ಕೈ ಹಿಡಿಯದೆ
ಬೆಳಕು ಕಾಣದೆ ಶಾರದೆ