ಭವ ಸಾಗರದ ಆಳದಿನಿಂದು |
ತಾಳದೆ ಇಂದು ಬಾಳದೆ ನೊಂದೇ |
ಮಹಿಮೆಯ ಆಲಿಸಿ ಧಾವಿಸಿ ಬಂದೆ||
ಸಿಂದ್ದಲಿಂಗ ಗುರು ಕಾಯೋ
ತಂದೆ ಕಾಯೋ ತಂದೆ || ಭವ ||
ದೀನರಿಗೆ ಎಡೆ ಆಗಿಹ ಊರಿಗೆ
ಪಂಗ ಪವಣೆಗಳು ಬೀರುವ ಧರೆಗೆ ||
ಬಂದಿಹೆನಾ ಶಿವ ಶರಣರ ಕೇರಿಗೆ ||
ಬಾಳಿನ ಭಾಗ್ಯದ ನಿಧಿಯ ಕಂಡೆ |
ಕೃಪಾರ್ಥನಾದೆ || ಭವ ||
ನೀರಿನ ದೀಪವ ಉರಿಸಿದ ಗುರುವೆ
ಪಾದನುದಿಸಿ ಜಲಸುರಿಸಿದ ದೊರೆಯೇ ||
ಕಲ್ಲು ಬಸವನ ಮೆಲ್ಲನೆ ಎಬ್ಬಿಸಿ |
ಹೆಡೆಯನು ನೀಡಿದ ಯಡೆಯೂರ್ ಒಡೆಯ |
ಯಡೆಯೂರ್ ಒಡೆಯ || ಭವ ||
ಶರಣೆಯ ಪತಿಯನು ಬದುಕಿಸಿ ಬಾಳಿಸಿ
ಮಾಂಗಲ್ಯ ಭಾಗ್ಯವ ನೀ ಕರುಣಿಸಿದೆ ||
ಮೂಢ ಬಸವನ ಪಟ್ಟಕ್ಕೆ ಏರಿಸಿದೆ ||
ಅರಸಿದೆ ಪ್ರಭುವೇ ನಿನ್ನ ಕನಿಕರಿಸು ನೀ ಕನಿಕರಿಸುವ || ಭವ||