ನಾರದ ಹಾಡಿದನು |
ನಾರದ ಹಾಡಿದನು ಆನಂದದಿ|
ನಾರದ ಹಾಡಿದನು |
ಗಂಧರ್ವರು ಶೃತಿ ಸೇರಿದಾಗ |
ನಂದಿ ಮೃದಂಗವ ನುಡಿಸಿರುವಾಗ |
ಸುರರು ಅಂಬರದಿ ಕುಣಿದಿರುವಾಗ || ನಾರದ ||
ಹರಿಹರ ಬ್ರಹ್ಮ ಶಿಶು ರೂಪದಲಿರೆ ||
ಅನುಸೂಯಯ ಮಡಿಲಲಿ ನಗುತಿರೆ ||
ಭೂದೇವಿಯು ಸಂಭ್ರಮದಲ್ಲಿ ನಲಿದಿರೆ || ನಾರದ ||
ಆ ಸಿರಿದೇವಿಯೇ ಓಡುತ ಬರಲು ||
ವಾಗ್ದೇವಿಯೆ ಮೂಕಾಗಿ ನಿಲ್ಲಲು |
ಆದಿ ಶಕ್ತಿ ಬೆರಗಾಗಿ ನೋಡಲು ||ನಾರದ ||
ಸೂರ್ಯನು ಚಂದ್ರನು ಧರೆಗಿಳಿಯುತಿರೆ
ಹಗಲು ಇರುಳು ತಿಳಿಯದೆ ಹೋಗಿದೆ ||
ತಾವರೆ ನೈದಿಲೆ ಅರಳುತ ನಗುತಿದೆ || ನಾರದ ||
ಜೋ ಜೋ ಎನುತಿರೆ ಖುಷಿ ಪತ್ನಿಯರು ||
ಜೈ ಜೈ ಎನುತಿರೆ ಮುನಿ ಪುಂಗವರು||
ನಾಲ್ಕು ವೇದಗಳು ಕೈ ಮುಗಿದಿರಲು ||ನಾರದ ||