ಮನೆ ದೇವರ ನಾಮ ಕಣ್ಗಳ ತೊಳೆ ಈ

ಕಣ್ಗಳ ತೊಳೆ ಈ

0

ಕಣ್ಗಳ ತೊಳೆ ಈ ಕೆಂಪಿನಲ್ಲಿ ||
ಸುಂದರ ಸಂಧ್ಯಾ ರಾಗದಲಿ ||ಕಣ್ಗಳ ||

ಲೋಕದ ನಾನಾ ದೃಶ್ಯವ ನೋಡಿ ||
ಕೊಳೆಯಾಗಿರುವೆ ಕಣ್ಗಳ ಜೋಡಿ ||
ನಿರ್ಮಲವಾಗಲಿ ತೊಳೆಯಲಿ ||
ಸುಂದರ ಮಂಗಳ ರಾಗದಲಿ ||ಕಣ್ಗಳ ||

ಜಗದ ಕುಹಕಗಳ ಮುಚ್ಚುವ ತೆರೆದಿ||
ಬಹಳ ಮುನ್ನವೇ ಆ ಕತ್ತಲೆ ಸರದಿ ||
ಕಣ್ಗಳ ತೊಳಯಿ ಕೆಂಪಿನಲ್ಲಿ||
ಮಂಗಳ ಕರವಹ ಧಾರೆಯಲಿ ||ಕಣ್ಗಳ ||

ಕೆಂಪನು ಕತ್ತಲೆ ನಂಗುವ ಮುನ್ನ
ನಿರ್ಮಲ ತಾರೆಯು ಬೆಳಗುವ ಮುನ್ನ ||
ಕಣ್ಗಳ ತೊಳೆ ಈ ಕೆಂಪಿನಲ್ಲಿ||
ಸುಂದರ ಸಂಧ್ಯಾ ರಾಗದಲ್ಲಿ || ಕಣ್ಗಳ ||