ಮನೆ ದೇವರ ನಾಮ ಶರಣು ಸಂಕೋಲೊದ್ಧಾರ ಅಸುರ

ಶರಣು ಸಂಕೋಲೊದ್ಧಾರ ಅಸುರ

0

ಶರಣು ಸಂಕೋಲೊದ್ಧಾರ ಅಸುರ ಕುಲ ಸಂಹಾರ
ಶರಣು ದಶರಥ ಬಾಲ ಜಾನಕಿ ಲೋಲ
ಈ ಮುದ್ದು ಈ ಮೂಕವು ಈ ತನುವಿನ ಕಾಂತಿ ||
ಈ ಬಿಲ್ಲು ಈ ಬಾಣ ಏನಂಥ ಭಾವ |
ಈ ತಮ್ಮ ಈ ಸೀತೆ ಈ ಭಂಟ ಈ ಭಾಗ್ಯ ||
ಯಾವ ದೇವರಿಗುಂಟು ಮೂರ್ಲೋಕದೊಳಗೆ || ಶರಣು ||

ಹುಟ್ಟ ಪೀತಾಂಬರವು ಹುಡಿಗೆಜ್ಜೆ ಮಾಣಿಕವು
ಪುಟ್ಟನವರತ್ನದ ಆಭರಣವಿರಲು|
ತೊಟ್ಟ ಭಾಷೆಗೆ ತಪ್ಪಾ |
ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ||
ಸೃಷ್ಟಿಯೊಳಗೆ ಎಣೆ ಕಾಣೆ ಸ್ಕೌಸಲ್ಯ ರಾಮ || ಶರಣು ||

ಬಾವಿಸಲ್ ಅಯೋಧ್ಯ ಪಟ್ಟಣದಲ್ಲಿ ವಾಸ ||
ಬೇಡಿದ ಇಷ್ಟಾರ್ಥಗಳ ಕೊಡುವೆನೆನುತಾ |
ಭಾವ ಸುದ್ದಿಯುಳ್ಳ ತನ್ನ ಭಕ್ತರ ಪೂರೆವ |
ಪುರಂದರ ವಿಠಲ ಅಯೋಧ್ಯ ರಾಮ ||ಶರಣು||