ಕಂದಾ ಬಾರೋ ಮುಕುಂದ ಬಾರೋ
ದೇವಿಕಿ ಕಂದಾ ಹೇ ಗೋವಿಂದ
ಶಾಶ್ವತವಾದ ನೊಂದಾ ತಾರೋ ಕಂದಾ
ಕಾಂತಾ ಬಾರೋ ಶ್ರೀಕಾಂತಾ ಬಾರೋ ||
ಶ್ರೀಧರ ಮಾಧವ ಹೇ ಗೋವಿಂದ ||
ನನ್ನ ಮನಸ್ಸಿಗೆ ನೆಮ್ಮದಿ ತಾರೋ ||ಕಂದಾ ||
ಬಾಲ ಬಾರೋ ಗೋಪಾಲ ಬಾರೋ ||
ಶ್ರೀಪತೆ ಶ್ರೀನಿಧೆ ಹೇ ಗೋವಿಂದ ||
ಕತ್ತಲೆ ಅಳಿಸುತ ಬೆಳಕನು ತಾರೋ || ಕಂದಾ ||
ರಂಗಾ ಬಾರೋ ಪಾಂಡುರಂಗ ಬಾರೋ|
ಕೇಶವ ವಾಮನ ಹೇ ಗೋವಿಂದ ||
ಚಿಂತೆಯ ನೀಗಿ ನಿಶ್ಚಿಂತೆಯ ತಾರೋ || ಕಂದಾ ||
ಹರಿಯೆ ಬಾರೋ ನರಹರಿಯೆ ಬಾರೋ ||
ಕರುಣಾ ಸಿಂಧು ಹೇ ಗೋವಿಂದ ||
ಮರಜನಕ ನಿನ್ನ ಮೊಗವ ತ್ತೋರೋ || ಕಂದಾ ||